ಹಂಪಿಯಲ್ಲಿ  ಬ್ಯಾಟರಿ ಚಾಲಿತ ಬಸ್ ಸಂಚಾರ ಆರಂಭ…

ಹಂಪಿ,ಮಾರ್ಚ್,9,2021(www.justkannada.in): ವಿಶ್ವ ಪರಂಪರೆಯ ತಾಣ ಹಂಪಿಯಲ್ಲಿ ಇಂದಿನಿಂದ ಪ್ರವಾಸಿಗರ  ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳ ಸಂಚಾರವನ್ನು ಖಾಸಗಿ ಸಹಭಾಗೀತ್ವದಲ್ಲಿ ಆರಂಭಿಸಲಾಗಿದೆ.jk

ಹಂಪಿಯಲ್ಲಿ ತೈಲ ಬಳಕೆಯ ವಾಹನಗಳಿಂದ ಶಿಲ್ಪ ಸ್ಮಾರಕಗಳಿಗೆ ಭವಿಷ್ಯದಲ್ಲಿ ಧಕ್ಕೆ ಉಂಟಾಗುತ್ತದೆ ಎಂಬ ನಿಟ್ಟಿನಲ್ಲಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳ ಓಡಾಟ ಆರಂಭಿಸುವ ಯೋಜನೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ್ದು. ಈ ‌ನಿಟ್ಟಿನಲ್ಲಿ  ಖಾಸಗಿ ಸಹಭಾಗೀತ್ವದಲ್ಲಿ ಮೊದಲ ಯೋಜನೆಯಾಗಿ ಪ್ರೀವಿಲೇಜ್ ಕಂಪನಿಯ ಸಹಕಾರದೊಂದಿಗೆ ಇಂದಿನಿಂದ ಮೂರು ದಿನಗಳ ಕಾಲ ಹಂಪಿಯಲ್ಲಿ ರೈಲು ಮಾದರಿಯ  ಬ್ಯಾಟರಿ ಚಾಲಿತ ಬಸ್ ಗಳ ಪ್ರಾಯೋಗಿಕ ಸಂಚಾರ ಆರಂಭಿಸಿದೆ.

ಮೂರು ದಿನಗಳ ನಂತರ ಪ್ರಯಾಣಿಕರ ಸ್ಪಂದನೆ ನೋಡಿಕೊಂಡು  ಪ್ರಯಾಣ ಧರ ನಿಗದಿ ‌ಮಾಡಲಿದೆಯಂತೆ. ಪ್ರವಾಸಿಗರಿಗೆ ಹೊರೆಯಾಗದಂತೆ ಸದ್ಯ ಓಡಾಡುವ ಮಾಮೂಲಿ ಬಸ್ ಗಳ ದರಕ್ಕಿಂತ  ಸ್ವಲ್ಪ ಹೆಚ್ಚಳವಿರಲಿದೆ ಇದು.   ಪ್ರಾಧಿಕಾರ ಮತ್ತು ಖಾಸಗಿ ‌ಕಂಪನಿಯು 30:70 ಅನುಪಾತದಲ್ಲಿ ನಿರ್ವಹಣೆ ಮಾಡಲಿದೆ. ಈ ಒಪ್ಪಂದದೊಂದಿಗೆ ಬ್ಯಾಟರಿ ಚಾಲಿತ ವಾಹನಗಳ ಸಂಚಾರ ಆರಂಭವಾಗಲಿದೆ.  ಸದ್ಯ ರೈಲು ಮಾದರಿಯ ಒಂದು ಹಾಗೂ ಆಟೋಮಾದರಿಯ ಮುಕ್ತವಾಹನ ಸಂಚಾರ ಆರಂಭವಾಗಲಿದೆ.Battery-powered- bus -traffic – Hampi-ballari

ಇವುಗಳ ಓಡಾಟದ ಸಾಧಕ‌ ಬಾಧಕ‌ ನೋಡಿಕೊಂಡು‌ ಮುಂದಿನ ದಿನ ಮತ್ತಷ್ಟು ವಾಹನಗಳ ವಿಸ್ತರಿಸಲಾಗುವುದು ಎಂದು ಹಂಪಿ ಪ್ರಾಧಿಕಾರದ ಪ್ರಭಾರ ಆಯುಕ್ತ ಸಿದ್ಧರಾಮೇಶ್ವರ ಹೇಳಿದ್ದಾರೆ.

ಹಳೇ  ವಾಹನಗಳಿಗೆ ಮುಕ್ತಿ :

ಈ ಹಿಂದೆ ಪ್ರಾಧಿಕಾರ  ಖರೀದಿಸಿದ್ದ ಸದ್ಯ ಬಳಕೆಯಲ್ಲಿ ಇಲ್ಲದ 10 ಬ್ಯಾಟರಿ ಚಾಲಿತ ವಾಹನಗಳನ್ನು ಮತ್ತೇ ಆರಂಭಿಸಲು ಸಹ ಗಂಭೀರ ಚಿಂತನೆ ನಡೆದಿದ್ದು. ಹೊಸ ವಾಹನಗಳನ್ನು ಬೈ ಬ್ಯಾಕ್ ಪಡೆಯಲು ಯೋಚಿಸಲಾಗಿದೆ ಈ ಬಗ್ಗೆ ಮುಂದಿನ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸುವುದಾಗಿ ಅವರು ಹೇಳಿದ್ದಾರೆ.

Key words: Battery-powered- bus -traffic – Hampi-ballari