ಮೈಸೂರಿನಲ್ಲಿ ಬಸವ ಜಯಂತಿ: ಸಚಿವ ಜಿಟಿ ದೇವೇಗೌಡರಿಂದ ಭರ್ಜರಿ ಡ್ಯಾನ್ಸ್: ಜಿಟಿಡಿ ಸ್ಟೆಪ್ಸ್ ಫಿದಾ ಆಗಿ ಶಿಳ್ಳಹೊಡೆದ ಜನರು…

ಮೈಸೂರು,ಮೇ,7,2019(www.justkannada.in): ಇಂದು ಬಸವಜಯಂತಿ ಹಿನ್ನೆಲೆ ಮೈಸೂರಿನಲ್ಲಿ ಬಸವ ಜಯಂತಿ  ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೈಸೂರಿನ ಬಸವೇಶ್ವರ ವೃತ್ತದಲ್ಲಿ ಇರುವ ಬಸವಣ್ಣ ಪುತ್ತಳಿಗೆ  ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡರು ಮಾಲಾರ್ಪಣೆ ಮಾಡಿದರು. ಸಚಿವ ಜಿಟಿಡಿಗೆ ಸುತ್ತೂರು ಶ್ರೀಗಳು ಸಾಥ್ ನೀಡಿದರು.  ಬಳಿಕ ನಗರದ ವಿವಿಧೆಡೆ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದ ಗನ್ ಹೌಸ್ ಬಳಿ  ಮೆರವಣಿಗೆಗೆ ಸುತ್ತೂರು ಶ್ರೀಗಳು ಚಾಲನೆ ನೀಡಿದರು. ಸುತ್ತೂರು ಶ್ರೀಗಳಿಗೆ ಸಚಿವ ಜಿ.ಟಿ ದೇವೇಗೌಡರು ಮತ್ತು ಶಾಸಕ ನಾಗೇಂದ್ರ ಸಾಥ್ ನೀಡಿದರು.

ಬಸವೇಶ್ವರರ ಪ್ರತಿಮೆಯನ್ನ ಹೊತ್ತು  ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಕಲಾತಂಡಗಳು ಭಾಗಿಯಾಗಿದ್ದವು. ಮಹಾಪುರುಷರ ವೇಷ ತೊಟ್ಟ ಮಕ್ಕಳು ನೋಡುಗರ ಕಣ್ಮನ ಸೆಳೆದವು.

ಮೆರವಣಿಗೆಯಲ್ಲಿ ಸಚಿವ ಜಿಟಿಡಿ ಭರ್ಜರಿ ಡ್ಯಾನ್ಸ್….

ಮೆರವಣಿಗೆ ವೇಳೆ ಸಚಿವ ಜಿಟಿ ದೇವೇಗೌಡರು ತಮಟೆ ಸದ್ಧಿಗೆ ಭರ್ಜರಿ ಡ್ಯಾನ್ಸ್ ಮಾಡಿದರು. ಟಮಟೆ ತಾಳಕ್ಕೆ ಸಚಿವ ಜಿ.ಟಿ ದೇವೇಗೌಡರು ಮನಬಿಚ್ಚಿ ಕುಣಿದರು. ಜಿಟಿ ದೇವೇಗೌಡರ ಸ್ಟೆಪ್ಸ್ ಗೆ  ನೋಡುಗರು ಫೀದಾ ಆಗಿ ಶಿಳ್ಳೆ ಚಪ್ಪಾಳೆ ಹೊಡೆದರು. ಇನ್ನು ಜಿ ಟಿ ದೇವೇಗೌಡರಿಗೆ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ ಸಾಥ್. ನೀಡಿದರು.

Key words: Basav Jayanti – Mysore- Dance – Minister- GT Deve Gowda.