ರೈತರಿಂದ ಬಾರುಕೋಲು ಚಳುವಳಿ ವಿಧಾನಸೌಧಕ್ಕೆ ಮುತ್ತಿಗೆ ಹಿನ್ನೆಲೆ: ಪೊಲೀಸ್ ಬಿಗಿ ಭದ್ರತೆ…

ಬೆಂಗಳೂರು,ಡಿಸೆಂಬರ್,9,2020(www.justkannada.in):  ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೈತರು ವಿಧಾನಸೌಧಕ್ಕೆ ಮುತ್ತಿಗೆ ಮತ್ತು  ಬಾರುಕೋಲು ಚಳುವಳಿ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ.logo-justkannada-mysore

ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಬಾರುಕೋಲು ಚಳುವಳಿ ಮತ್ತು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಿದ್ದು ಸಾವಿರಾರು ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಬೆಂಗಳೂರಿಗರಿಗೆ ಇಂದು ಪ್ರತಿಭಟನೆಯ ಬಿಸಿ ತಟ್ಟಲಿದೆ.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ರಾಜಭವನಕ್ಕೆ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ಮೂರು ಮಂದಿ ಡಿಸಿಪಿ, 10ಮಂದಿ ಎಸಿಪಿ,  30 ಮಂದಿ ಇನ್ಸ್ ಪೆಕ್ಟರ್ಸ್, 70 ಮಂದಿ ಪಿಎಸ್ ಐ,  ಹಾಗೂ 1 ಸಾವಿರ ಕಾನ್ಸ್ ಟೇಬಲ್ ಗಳನ್ನ ನಿಯೋಜನೆ ಮಾಡಲಾಗಿದೆ.barukolu-movement-farmers-today-police-tight-security

ಹಾಗೆಯೇ 40 ಕೆಎಸ್ ಆರ್ ಪಿ ತುಕಡಿ, 40 ಡಿಎಆರ್ ತುಕಡಿ ನಿಯೋಜಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.

Key words:  barukolu movement – farmers- today – police -Tight security.