ಅಡ್ಡಗೋಡೆಯ ಮೇಲೆ ದೀಪ ಇಡುವ ಕಾರ್ಯ ಬೇಡ : ಕೆಎಸ್ ಆರ್ ಟಿಸಿ ರಾಜ್ಯಾಧ್ಯಕ್ಷ ಚಂದ್ರು

ಬೆಂಗಳೂರು,ಡಿಸೆಂಬರ್,14,2020(www.justkannada.in) : ಸರ್ಕಾರವು 9 ಬೇಡಿಕೆ ಈಡೇರಿಕೆ ಸಂಬಂಧಿಸಿದಂತೆ ಲಿಖಿತ ಆದೇಶ ಪ್ರತಿ ನೀಡುವವರೆಗೂ ಮುಷ್ಕರವನ್ನು ಹಿಂಪಡೆಯುವುದಿಲ್ಲ. ಅಡ್ಡಗೋಡೆಯ ಮೇಲೆ ದೀಪ ಇಡುವ ಕಾರ್ಯವಾಗಬಾರದು ಎಂದು ಕೆಎಸ್ ಆರ್ ಟಿಸಿ ರಾಜ್ಯಾಧ್ಯಕ್ಷ ಚಂದ್ರು ಹೇಳಿದ್ದಾರೆ.logo-justkannada-mysoreನಮ್ಮ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಪ್ರತಿನಿಧಿ ಬಂದು ಲಿಖಿತ ಮಾಹಿತಿ ನೀಡಲಿ. ಈ ವಿಚಾರದಲ್ಲಿ ಸ್ಪಷ್ಟತೆ ಅಗತ್ಯವಾಗಿದೆ. 6ನೇ ವೇತನ ಜಾರಿಯಾಗಿದೆ ಎಂಬ ಆದೇಶ ಪ್ರತಿ ಬೇಕಾಗಿದೆ ಎಂದಿದ್ದಾರೆ.

ಸಾರ್ವಜನಿಕರು ಹಾಗೂ ಕಾರ್ಮಿಕರ ಹಿತವೂ ನಮಗೆ ಮುಖ್ಯವಾಗಿದೆ. ಸರ್ಕಾರವು ಆದೇಶ ಪ್ರತಿಯನ್ನು ಯಾವಾಗ ನೀಡುತ್ತದೆ ಎಂಬುದನ್ನು ನಿರ್ಧರಿಸಲಿ ಎಂದು ಕೆಎಸ್ ಆರ್ ಟಿಸಿ ರಾಜ್ಯಾಧ್ಯಕ್ಷ ಚಂದ್ರು ತಿಳಿಸಿದ್ದಾರೆ.

 barricade-No-lamp-function-KSRTC-President- Chandru
ಸಾಂದರ್ಭಿಕ ಚಿತ್ರ

key words : barricade-No-lamp-function-KSRTC-President- Chandru