ಬ್ಯಾಂಕಿಂಗ್ ವ್ಯವಸ್ಥೆ ಕನ್ನಡೀಕರಣಗೊಳಿಸಿ: ಇಲ್ಲದಿದ್ರೆ ಬ್ಯಾಂಕ್ ಗೆ  ನುಗ್ಗಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್.

ಮೈಸೂರು,ಜುಲೈ,21,2021(www.justkannada.in):  ಬ್ಯಾಂಕಿಂಗ್ ವ್ಯವಸ್ಥೆ ಕನ್ನಡೀಕರಣಗೊಳಿಸುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.jk

ಹಿಂದಿ ಹೇರಿಕೆ ವಿರುದ್ದ ಹಾಗೂ ಕೆಜಿಎಫ್ ನಲ್ಲಿ  ತಮಿಳುನಗರ ಸಭೆ ಆಗಿದೆಯೆಂದು ಮೈಸೂರಿನ ಜಯಚಾಮಾರಾಜ ಒಡೆಯರ್ ವೃತ್ತದಲ್ಲಿ ಕನ್ನಡ ಚಳುವಳಿ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ವಲಯಗಳನ್ನು ಕನ್ನಡೀಕರಣಗೊಳಿಸಬೇಕು. ಬ್ಯಾಂಕ್ ನ ಎಲ್ಲಾ ವಹಿವಾಟು ಕನ್ನಡದಲ್ಲೇ ಆಗಬೇಕು. ಇಲ್ಲವಾದರೆ ಬ್ಯಾಂಕ್ ಗೆ ನುಗ್ಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ವಾಟಾಳ್ ನಾಗರಾಜ್ , ಕೆಜಿಎಫ್ ನಲ್ಲಿ ತಮಿಳು ನಾಮಫಲಕ ಹಾಗೂ ತಮಿಳರ ಆಡಳಿತದ ವಿರುದ್ದ ಜುಲೈ 26 ರಂದು ಕೆಜಿಎಫ್ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.

ಬಿಎಸ್ ವೈ ರಾಜೀನಾಮೆಗೆ ಆಗ್ರಹ…

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ 6  ತಿಂಗಳೇ ಆಗಿದೆ. ಈಗಂತೂ ತುಟ್ಟ ತುದಿಗೆ ಬಂದಿದೆ. ಸಿಎಂ ಬದಲಾವಣೆ ಒಂದು ವರ್ಗ ಒತ್ತಾಯ ಮಾಡುತ್ತಿದೆ. ಇವರು ಸಿಎಂ ಆಗಿ ಉಳಿಬೇಕು ಅಂತ ಹೊರಾಟ ಮಾಡ್ತಾ ಇದಾರೆ. ಆಡಳಿತ ಕುಸಿದುಬಿದ್ದಿದೆ. ಆಡಳಿತ ಕುಸಿದಿರುವುದರಿಂದ ಯಡಿಯೂರಪ್ಪಗೆ ಅರ್ಹತೆ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ ಬಿಎಸ್ ವೈ ಪರ ಮಠಾಧೀಶರ ಬ್ಯಾಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಾಟಾಳ್ ನಾಗರಾಜ್, ಮಠಾಧೀಶರನ್ನ ದೇವರೇ ಕಾಪಾಡಬೇಕು. ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ. ಮಠಗಳಿಗೆ ಐತಿಹಾಸಿಕ ಪರಂಪರೆ ಇದೆ. ಮಠಾಧಿಪತಿಗಳು ಯಾವತ್ತೂ ಬೀದಿಗೆ ಬಂದಿಲ್ಲ. ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ. ವೀರಶೈವ ತತ್ವ ಸಿದ್ದಾಂತ ಇಡೀ ಸಮಾಜಕ್ಕೆ ದಾರಿದೀಪ. ಆದರೆ ಮಠಗಳನ್ನು ಯಡಿಯೂರಪ್ಪ ಕತ್ತಲೆಯಲ್ಲಿ ಇಡುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳು ಯಾವತ್ತೂ ಮಠಗಳನ್ನು ಸೇರಿಸಿಕೊಳ್ಳಲಿಲ್ಲ. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು, ಆಡಳಿತ ನಡೆಸುತ್ತಿರುವುದು ಎಲ್ಲವೂ ಅಪವಿತ್ರ ಎಂದು ಆರೋಪಿಸಿದರು.

ಕೇಂದ್ರದ ಮೇಲೆ ಯಡಿಯೂರಪ್ಪ ಬೆದರಿಕೆ ಹಾಕುತ್ತಿದ್ದಾರೆ. ಮಠಾಧಿಪತಿಗಳು ದಯಮಾಡಿ ಇದರಲ್ಲಿ ಕೈ ಹಾಕಬೇಡಿ‌. ಕೆಲ ಶ್ರೀಮಂತ ಮಠಗಳು ಮಾತ್ರ ಯಡಿಯೂರಪ್ಪ ಜೊತೆ ಬಂದಿದ್ದಾರೆ. ನಿಮ್ಮ ಶ್ರೀಮಂತ ಮಠಗಳ ಮೆಡಿಕಲ್ ಕಾಲೇಜಿನಲ್ಲಿ ಲಿಂಗಾಯತರಿಗೆ , ಬಡವರಿಗೆ ಉಚಿತ ಮೆಡಿಕಲ್ ಸೀಟ್ ಕೊಟ್ಟಿದ್ದೀರಿ ಬಹಿರಂಗಪಡಿಸಿ ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

Key words: banking system-kannada-mysore-Vatal Nagaraj-protest