ಪತ್ನಿಯ ಗೆಳೆಯನಿಂದ ಮಕ್ಕಳ ಮೇಲೆ ಹಲ್ಲೆ: ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ ಪತಿ

kannada t-shirts

ಬೆಂಗಳೂರು:ಜುಲೈ-4:(www.justkannada.in) ಪತ್ನಿಯ ಗೆಳೆಯ ಮನೆಗೆ ಬಂದು ಚಿಕ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿ, ರೂಮಿನಲ್ಲಿ ಕೂಡಿಹಾಕಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯೇ ಪತಿಯನ್ನು ಮನೆಯಿಂದ ಹೊರಹಾಕಿದ್ದಾಳೆ. ಈ ಹಿನ್ನಲೆಯಲ್ಲಿ ರಕ್ಷಣೆ ನೀಡುವಂತೆ ಕೋರಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನ ಅಶೋಕಾ ನಗರದಲ್ಲಿ ನಡೆದಿದೆ.

ವಿಕ್ಟೋರಿಯಾ ಲೇಔಟ್‌ನ ನಿವಾಸಿ ಮೈಕಲ್ ಎಂಬುವರು ತನ್ನ ಮಕ್ಕಳಿಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಮೈಕಲ್ ಮನೆಯಲ್ಲಿರದ ವೇಳೆಯಲ್ಲಿ ಮನೆಗೆ ಬಂದ ಪತ್ನಿಯ ಗೆಳೆಯ ವಿಕ್ಟರ್ ಎಂಬಾತ ತನ್ನ ಮಕ್ಕಳಾದ ಡೇನಿಯಲ್(7) ಹಾಗೂ ಮಗಳು ಕೇಟಿಲ್ಯಾನ್(10) ಮೇಲೆ ಬೆಲ್ಟ್‌ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಮಕ್ಕಳನ್ನ ಕೊಠಡಿಯಲ್ಲಿ ಕೂಡಿ ಹಾಕಿದ್ದಾನೆ.

ಈ ಬಗ್ಗೆ ತಂದೆ ಮನೆಗೆ ಬಂದಾಗ ಮಕ್ಕಳು ತಮ್ಮ ಮೇಲೆ ವಿಕ್ಟರ್ ನಡೆಸಿದ ಹಲ್ಲೆಯನ್ನು ತಿಳಿಸಿದ್ದಾರೆ. ಮಕ್ಕಳಿಗೆ ವಿಕ್ಟರ್ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿ ಪ್ರೆಸಿಲ್ಲಾ ಗಂಡನನ್ನೇ ಮನೆಯಿಂದ ಹೊರಹಾಕಿದ್ದಾರೆ.

ಹೀಗಾಗಿ ಮಕ್ಕಳಿಗೆ ಸೂಕ್ತ ರಕ್ಷಣೆ ಕೋರಿ ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮೈಕಲ್‌ ಅಶೋಕ ನಗರ ಪೊಲೀಸರ ಮೋರೆ ಹೋಗಿದ್ದಾರೆ.

ಪತ್ನಿಯ ಗೆಳೆಯನಿಂದ ಮಕ್ಕಳ ಮೇಲೆ ಹಲ್ಲೆ: ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ ಪತಿ

Bangalore,wife boyfriend, Assault,children

website developers in mysore