ಬೆಂಗಳೂರು ವಿವಿಯಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ

kannada t-shirts

ಬೆಂಗಳೂರು, ಜುಲೈ 28, 2022 (www.justkannada.in): ಬೆಂಗಳೂರು ವಿಶ್ವವಿದ್ಯಾಲಯದ ಇತ್ತೀಚಿನ ಸಿಂಡಿಕೇಟ್ ಸಭೆಯಲ್ಲಿ ಜ್ಞಾನಭಾರತಿ ಆವರಣದಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ಒದಗಿಸುವ ಬೇಡಿಕೆಯನ್ನು ಅನುಮೋದಿಸಲಾಯಿತು.

“ಸಿಂಡಿಕೇಟ್ ಸಭೆಯಲ್ಲಿ ವಿಶೇಷ ಅಗತ್ಯಳಿರುವ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಒದಗಿಸುವ ಕುರಿತು ಚರ್ಚಿಸಲಾಯಿತು ಹಾಗೂ ಇದನ್ನು ಇತರೆ ಸಮಿತಿಗಳಲ್ಲಿಯೂ ಚರ್ಚಿಸುತ್ತೇವೆ. ಈ ನಿರ್ಧಾರದ ಅನುಷ್ಠಾನದ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು,” ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜಯಕರ ಎಸ್.ಎಂ. ಅವರು ತಿಳಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಗಳು ಒಳಗೊಂಡಂತೆ ಒಟ್ಟು 11 ವಿಶೇಷಚೇತನ ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ವಿಶೇಷಚೇತನರ ಸಬಲೀಕರಣ ಕೋಶದ ಮಾಜಿ ನಿರ್ದೇಶಕರು ಹಾಗೂ ರಾಜ್ಯಶಾಸ್ತ್ರದ ಪ್ರಾಧ್ಯಾಪಕರೂ ಆಗಿರುವ ಡಾ. ಎಸ್.ವೈ. ಸುರೇಂದ್ರ ಕುಮಾರ್ ಅವರು ಈ ಕುರಿತು ಮಾತನಾಡುತ್ತಾ, “ಪಿಡಬ್ಲ್ಯುಡಿ ಕಾಯ್ದೆ ೨೦೧೬ರ ಪ್ರಕಾರ ವಿಶ್ವವಿದ್ಯಾಲಯದ ಪ್ರತಿ ವಿಭಾಗದಲ್ಲಿಯೂ ವಿಶೇಷಚೇನತರಿಗೆ ಮೀಸಲಾತಿ ಇದ್ದರೂ ಪ್ರವೇಶಾತಿ ಪಡೆಯುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದೆ. ನಮ್ಮ ವಿಶ್ವವಿದ್ಯಾಲಯವು ವಿಶೇಷಚೇತನ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದೆ. ವಿಶೇಷ ಅಗತ್ಯಗಳಿರುವ ವಿದ್ಯಾರ್ಥಿಗಳಿಗಾಗಿ ನಮ್ಮ ಗ್ರಂಥಾಲಯವನ್ನು ಉನ್ನತೀಕರಿಸಲಾಗಿದೆ. ಉದಾಹರಣೆಗೆ, ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳೀಗಾಗಿ ಬ್ರೈಲ್ ಸಂಪನ್ಮೂಲ ಕೇಂದ್ರವಿದೆ ಹಾಗೂ ಶ್ರವಣ ಆಧಾರಿತ ಕಲಿಕಾ ಸಾಧನಗಳೂ ಇವೆ. ಜ್ಞಾನಭಾರತಿ ಆವರಣದ ಗ್ರಂಥಾಲಯದಲ್ಲಿ ವಿಶೇಷ ಅಗತ್ಯಗಳ ಸಾಫ್ಟ್ ವೇರ್ ಅನ್ನೂ ಅಳವಡಿಸಲಾಗಿದೆ,” ಎಂದರು.

ಒಂದು ವೇಳೆ ಸರ್ಕಾರ ನಮ್ಮ ಈ ಉಚಿತ ಸೌಲಭ್ಯಗಳಿಗೆ ಅಗತ್ಯವಿರುವ ಹಣವನ್ನು ಒದಗಿಸದಿದ್ದರೆ, ವಿಶ್ವವಿದ್ಯಾಲಯವೇ ವೆಚ್ಚಗಳನ್ನು ಭರಿಸಲಿದೆ, ಎಂದು ಡಾ. ಕುಮಾರ್ ಮಾಹಿತಿ ನೀಡಿದರು.

“ಬೆಂಗಳೂರು ವಿಶ್ವವಿದ್ಯಾಲಯ, ವಿಶೇಷಚೇತನ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಪ್ರತ್ಯೇಕ ಕೋಶ ಹೊಂದಿರುವ ಕೆಲವೇ ವಿಶ್ವವಿದ್ಯಾಲಯಗಳ ಪೈಕಿ ಸೇರಿದೆ. ಐಐಟಿ ಹಾಗೂ ಜೆಎನ್‌ ಯುದಂತಹ ದೊಡ್ಡ ಕಾಲೇಜುಗಳನ್ನು ಹೊರತುಪಡಿಸಿದಂತೆ ದೇಶದಲ್ಲಿ ಇಂತಹ ವ್ಯವಸ್ಥೆ ಇರುವ ಬಹಳ ಕಡಿಮೆ ಸಂಖ್ಯೆಯ ಕಾಲೇಜುಗಳಿವೆ. ಕರ್ನಾಟಕದಲ್ಲಿ ಕೇವಲ ಎರಡು ವಿಶ್ವವಿದ್ಯಾಲಯಗಳಲ್ಲಿ ಈ ವ್ಯವಸ್ಥೆ ಇದೆ,” ಎಂದು ವಿವರಿಸಿದರು.

ಎಸ್‌ಸಿ/ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳಿಗೂ ಸಹ ವಿಶ್ವವಿದ್ಯಾಲಯದ ವತಿಯಿಂದ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆ ಹೊಂದಿರುವ ಪದವಿ ಕಾಲೇಜುಗಳಿಗೆ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಬಳಕೆಗಾಗಿ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸಲು ರೂ.೨೫,೦೦೦ ದಿಂದ ರೂ.೨೫,೦೦೦ ಹಣಕಾಸಿನ ಬೆಂಬಲವನ್ನು ಒದಗಿಸಲಾಗುತ್ತಿದೆ, ಎಂದು ತಿಳಿಸಿದರು.

ಸುದ್ದಿ ಮೂಲ: ಬೆಂಗಳೂರು ಮಿರರ್

Key words: Bangalore University- provides -free – students- -special needs

website developers in mysore