ಎಲ್ಲಾ ಹೊರ ಗುತ್ತಿಗೆ ನೌಕರರನ್ನ ಸೇವೆಯಿಂದ ಬಿಡುಗಡೆಗೊಳಿಸಿದ ಬೆಂಗಳೂರು ವಿವಿ.

Promotion

ಬೆಂಗಳೂರು,ಅಕ್ಟೋಬರ್,9,2021(www.justkannada.in): ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೊರಗುತ್ತಿಗೆ ನೌಕರರುಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಸೇವೆಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಬೆಂಗಳೂರು ವಿವಿ ಕುಲಸಚಿವರು, ಉಲ್ಲೇಖಿತ (1)ರ ಸರ್ಕಾರದ ಪತ್ರದಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಪೂರ್ವಾನುಮೋದನೆ ಪಡೆಯದೆ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಅಧಿನಿಯಮ-2000 ದ ಪ್ರಕರಣ 56 ರ ಉಪಬಂಧಗಳು ಹಾಗೂ ರಾಜ್ಯ ಸರ್ಕಾರದ ಪ್ರಸಕ್ತ ನೇಮಕಾತಿ ಹಾಗೂ ಮೀಸಲಾತಿ, ಕಾರ್ಯನೀತಿ ನಿಯಮಗಳನ್ನು ಪಾಲಿಸದೆ ನಿಯಮಬಾಹಿರವಾಗಿ ಅರ್ಹತೆಯ ಮಾನದಂಡಗಳನ್ನು ಮೀರಿ ಮಂಜೂರಾದ ಹುದ್ದೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿ ಮಾಡಿಕೊಂಡಿರುವ ಬೋಧಕ, ಬೋಧಕೇತರ ತಾತ್ಕಾಲಿಕ/ ಗುತ್ತಿಗೆ/ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಹೊಂದಿರುವ ಸಿಬ್ಬಂದಿಗಳು ಖಾಯಮಾತಿ ಹಾಗೂ ಇತರ ಸೌಲಭ್ಯಗಳಿಗಾಗಿ ಪದೇ ಪದೇ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳನ್ನು ದಾಖಲಿಸಿ ಸರ್ಕಾರದ ಅಮೂಲ್ಯ ಸಮಯವನ್ನು ವ್ಯರ್ಥಮಾಡುತ್ತಿರುವುದರಿಂದ, ಈ ಕೂಡಲೇ ಅಂತಹ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸುವಂತೆ ನಿರ್ದೇಶಿಸಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೊರಗುತ್ತಿಗೆ ನೌಕರರುಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಸೇವೆಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೊರಗುತ್ತಿಗೆ ನೌಕರರ ಸೇವೆಯನ್ನು ದಿನಾಂಕ 08.10.2021 ರ ಅಪರಾಹ್ನ ಬೆಂಗಳೂರು ವಿಶ್ವವಿದ್ಯಾಲಯದ ಹೊರಗುತ್ತಿಗೆ ಸೇವೆಯಿಂದ ಬಿಡುಗಡೆ ಗೊಳಿಸಲಾಗಿದೆ. ಹೊರಗುತ್ತಿಗೆ ನೌಕರರ ನೇಮಕದ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಆದೇಶ ಪಡೆಯಲಾಗುವುದು. ಈ ಆದೇಶಕ್ಕೆ ವಿರುದ್ಧವಾಗಿ ಹೊರಗುತ್ತಿಗೆ ನೌಕರರನ್ನು ಮುಂದುವರೆಸಿದಲ್ಲಿ ಸಂಬಂಧಪಟ್ಟ ವಿಭಾಗ ಕಛೇರಿಗಳ ಅಧಿಕಾರಿಗಳು ಮುಖ್ಯಸ್ಥರು ಸಮನ್ವಯಾಧಿಕಾರಿಗಳು ನಿರ್ದೇಶಕರುಗಳೇ ಕಾನೂನಾತ್ಮಕ ಪರಿಣಾಮಗಳಿಗೆ ಹೊಣೆಗಾರರಾಗಬೇಕಾಗುತ್ತದೆ ಎಂದು ಕುಲಸಚಿವರು ಆದೇಶಿಸಿದ್ದಾರೆ.

ENGLISH SUMMARY…

BU removes all outsourced employees
Bengaluru, October 9, 2021 (www.justkannada.in): The Bangalore University has issued orders to remove all employees who are working on an outsourced basis from service.
Following complaints and court cases about the recruitment of the number of outsourced employees violating Sec. 56 of the Karnataka State University Act, 2000, and without following the legal criteria, the government had ordered the University authorities to take action immediately.
Following this, the Bangalore University has issued orders relieving all the employees, who were employed on outsource basis with effect from 08.10.2021 afternoon. The Bangalore University Registrar has informed that the orders about the recruitment of outsourced employees will

Key words: Bangalore university- issued -service – Temporary employees – Release from service