ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಆರೋಪಿಗಳು ಅಂದರ್.

Promotion

ಬೆಂಗಳೂರು,ಆಗಸ್ಟ್,8,2021(www.justkannada.in): ಉದ್ಯಮಿ  ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದವರೇ  ಖದೀಮರು ಅದೇ ಮನೆಗೆ ಕನ್ನ ಹಾಕುವ ಕೆಲಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಉದ್ಯಮಿಯೊಬ್ಬರ ಮನೆಯಲ್ಲಿ 17 ಲಕ್ಷ ರೂ. ದೋಚಿದ್ಧ ನಾಲ್ವರು ಖದೀಮರನ್ನ ಪೊಲೀಸರು ಬಂಧಿಸಿದ್ದಾರೆ.  ದೀಪಕ್ ತಗುರ್ನಾ, ಸುರೇಶ್ ಬಹದ್ದೂರ್, ಕಮಲ್ ಬಹದ್ದೂರ್ ಮತ್ತು ರಮೇಶ್  ಬಂಧಿತ ಆರೋಪಿಗಳು.

 ಗ್ರಾನೈಟ್ ಬ್ಯುಸಿನೆಸ್ ಮಾಡಿಕೊಂಡಿದ್ದ ಉದ್ಯಮಿ ಅಮೇರಿಕದಲ್ಲಿರುವ ತನ್ನ ಮಗನಿಗೆ ಕಳುಹಿಸಿಕೊಡಲು ಅಮೇರಿಕ ಡಾಲರ್ ಇಟ್ಟಿದ್ದರು. ಈ ವಿಷಯ ಆರೋಪಿಗಳಿಗೆ ತಿಳಿದಿತ್ತು. ಮನೆಯಲ್ಲಿ ಯಾರು ಇಲ್ಲದೇ ಇರುವಾಗ ಅಮೇರಿಕ ಡಾಲರ್ ಮತ್ತು 17 ಲಕ್ಷ ನಗದನ್ನು ಖದೀಮರು ದೋಚಿದ್ದಾರೆ. ganja peddlers arrested by mysore police

ಮಗನನ್ನು ಅಮೇರಿಕಾಗೆ ಕಳುಹಿಸಿಕೊಡಲು ಡಾಲರ್ ಎಕ್ಸ್ ಚೇಂಜ್ ಮಾಡಿಟ್ಟುಕೊಳ್ಳಲಾಗಿತ್ತು. ಆದರೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ನಗದು ಜೊತೆ ಕೂಡಿಟ್ಟಿದ್ದ ಡಾಲರ್ ಅನ್ನು ಕದ್ದು ಪರಾರಿಯಾಗಿದ್ದರು. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

Key words: Bangalore-thief-arrest-17 lakhs