ಬೆಂಗಳೂರು ಈಗ ಸ್ಟಾರ್ಟ್ ಅಪ್ ಗಳ  ಸಿಟಿ: ಕೃಷಿ ವಿಜ್ಞಾನದಲ್ಲಿ ಹೊಸದೊಂದು ಕ್ರಾಂತಿ ಆಗಬೇಕಿದೆ: ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹೇಳಿಕೆ…

ಬೆಂಗಳೂರು,ಜ,3,2020(www.justkannada.in): ಕೃಷಿ ವಿಜ್ಞಾನದಲ್ಲಿ ಹೊಸದೊಂದು ಕ್ರಾಂತಿ ಆಗಬೇಕಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಬೆಂಗಳೂರಿನ ಜಿ.ಕೆ ವಿಕೆ ಮೈದಾನದಲ್ಲಿ ನಡೆಯುತ್ತಿರುವ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ  ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನದ ಅಧ್ಯಕ್ಷ ಕೆ.ಎಸ್ ರಂಗಪ್ಪ, ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಹರ್ಷವರ್ಧನ್ ಸೇರಿ ಹಲವರು ಭಾಗಿಯಾಗಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಹೊಸ ವರ್ಷದ ನನ್ನ ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ .  ವರ್ಷದ ಮೊದಲ ಕಾರ್ಯಕ್ರಮ ನನಗೆ ಖುಷಿ ತಂದಿದೆ. ಚಂದ್ರಯಾನ-2 ಸಂದರ್ಭ ನಾನು ಬೆಂಗಳೂರಿಗೆ ಬಂದಿದ್ದೆ. ಅಗ ನಮ್ಮ ದೇಶ ವಿಜ್ಞಾನವನ್ನು ಸಂಭ್ರಮಿಸಿದ್ದ ರೀತಿ ನನಗೆ ಸದಾ ನೆನಪಿರುತ್ತೆ. ಉದ್ಯಾನನಗರಿಯಾಗಿದ್ದ ಬೆಂಗಳೂರು ಇದೀಗ ಹೊಸ ಉದ್ಯಮಗಳಿಗೆ ನೆಚ್ಚಿನ ತಾಣವಾಗಿದೆ. ಈಗ ಬೆಂಗಳೂರು ಸ್ಟಾರ್ಟ್ ಅಪ್ ಸಿಟಿಯಾಗಿದೆ  ಬೆಂಗೂಳೂರು ಮೊದಲು ಗಾರ್ಡನ್ ಸಿಟಿ ಯಾಗಿತ್ತು. ಈಗ ಸ್ಟಾರ್ಟ್ ಅಪ್ ಗಳ  ಸಿಟಿಯಾಗಿ ಬದಲಾಗಿದೆ. ನಮ್ಮ ಕನಸು ನನಸಾಗುವತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದೇವೆ ಎಂದರು.

ಭಾರತದ ಅಭಿವೃದ್ದಿ ವಿಜ್ಞಾನ- ತಂತ್ರಜ್ಞಾನದ ಬೆಳವಣಿಗೆಯ ಆಧಾರದ ಮೇಲೆ ನಿಂತಿದೆ.  ದೇಶಕ್ಕಾಗಿ ಏನಾದರೂ ಮಾಡಬೇಕು ಎಂದು ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.  ವಿಜ್ಞಾನ ತಂತ್ರಜ್ಞಾನ ಭಾರತದದ ಶಕ್ತಿ. ಜನರಿಂದ ಜನರಿಗಾಗಿ ತಂತ್ರಜ್ಞಾನ ಬಳಸುತ್ತೇವೆ. ಭಾರತವನ್ನ ಒಂದು ಮಾಡುವಲ್ಲಿ ವಿಜ್ಞಾನ –ತಂತ್ರಜ್ಞಾನ ಕೊಡುಗೆ ಅಪಾರ. ಭಾರತದಲ್ಲಿ ಸ್ಮಾರ್ಟ್ ಫೋನ್ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತದೆ. ಗ್ರಾಮೀಣಾಭಿವೃದ್ಧಿಗೆ ವಿಜ್ಞಾನ ತಂತ್ರಜ್ಞಾನದ ಕೊಡುಗೆಯ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೋದಿ ತಿಳಿಸಿದರು.

ಕೇಂದ್ರದ ಎಲ್ಲಾ ಯೋಜನೆಗಳು ಯಶಸ್ವಿ..

ಸ್ವಚ್ಛ ಭಾರತದಿಂದ ಆಯುಷ್ಮಾನ್ ಯೋಜನೆವರೆಗೆ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಯಶಸ್ವಿಯಾಗಿವೆ. ಈ ಯಶಸ್ಸಿನ ಹಿಂದೆ ಉತ್ತಮ ಆಡಳಿತ ತಂತ್ರಜ್ಞಾನದ ಅಡಗಿದೆ. 2020ನ್ನ. ಕಳೆದ 5 ವರ್ಷದಿಂದ ಗ್ರಾಮೀಣಭಿವೃದ್ದಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಗಾಗಿ ಬಳಸೋಣ. ಇನ್ನುಯ ಹವಮಾನದ ಬಗ್ಗೆ ರೈತರಿಗೆ ಕಾಲಕಾಲಕ್ಕೆ ಮಾಹಿತಿ ಸಿಗುತ್ತಿದೆ. ರೈತರಿಗೆ ಬೆರಳತುದಿಯಲ್ಲಿ ಹವಮಾನದ ಬಗ್ಗೆ ಮಾಹಿತಿ ಸಿಗುತ್ತಿದೆ. ಇದಕ್ಕೆ ಮಾಹಿತಿ ತಂತ್ರಜ್ಞಾನ ಕಾರಣ.  ಮಧ್ಯವರ್ತಿಗಳ  ಅವಶ್ಯವಿಲ್ಲದೆ ರೈತರ ಬೆಳೆ ಮಾರಾಟ ಮಾಡಲು ಸಾಧ್ಯ. ಬಡವರಿಗೆ 2 ಕೋಟಿ ಮನೆ ಸಕಾಲದಲ್ಲಿ ನಿರ್ಮಾಣಕ್ಕೆ ವಿಜ್ಞಾನ ತಂತ್ರಜ್ಞಾ ಕಾರಣ. ಸರ್ಕಾರದ ಯೋಜನೆಗಳಿಗೆ ತಂತ್ರಜ್ಞಾನ ಉಪಯುಕ್ತವಾಗಿದೆ ಎಂದು ನುಡಿದರು.

ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಅವಿಷ್ಕಾರವಾಗಬೇಕಿದೆ…

ಪ್ಲಾಸ್ಟಿಕ್ ನಿಂದ ಜೀವ ಸಂಕುಲಕ್ಕೆ ಕುತ್ತು. ಪ್ಲಾಸ್ಟಿಕ್ ನಿಂದ ಭೂಮಿ ಕಲುಷಿತವಾಗುತ್ತಿದೆ.  ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಅವಿಷ್ಕಾರವಾಗಬೇಕಿದೆ. ಪ್ಲಾಸ್ಟಿಕ್ ಬಳಕೆ ಬೇಡ. ಬಳಸುವುದನ್ನ ನಿಲ್ಲಿಸಬೇಕು ಎಂದು ಮನವಿ ಮಾಡಿದ ಪ್ರಧಾನಿ ಮೋದಿ, ನೀರಿನ ಮರು ಬಳಕೆಗೆ ಹೆಚ್ಚು ಒತ್ತು ನೀಡಬೇಕು.   ಆರ್ಥ ವ್ಯವಸ್ಥೆ ಬಲಪಡಿಸಲು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ವಿಜ್ಞಾನದಲ್ಲಿ ಹೊಸದೊಂದು ಕ್ರಾಂತಿ ಆಗಬೇಕಿದೆ. ಕೃಷಿ ಆಧಾರಿತ ಸಂಶೋಧನೆಗಳ ಪ್ರಮಾಣ ಹೆಚ್ಚಬೇಕಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ಆಗಬೇಕು. ಲೋಹಗಳ ಮರುಬಳಕೆಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

key words: Bangalore – start-up- city-Prime Minister –narendra Modi- Indian Science Congress conference