ಮನೆ ಕೆಲಸಕ್ಕೆಂದು ಯುವತಿ ಕರೆತಂದು ಅತ್ಯಾಚಾರ: ಆರೋಪಿ ಹಾಗೂ ಆತನ ಪತ್ನಿ ಬಂಧನ…

kannada t-shirts

ಬೆಂಗಳೂರು,ಡಿ,14,2019(www.justkannada.in): ಮನೆ ಕೆಲಸಕ್ಕೆಂದು ಯುವತಿಯನ್ನ ಕರೆತಂದು ಆಕೆಯ ಮೇಲೆ ಅತ್ಯಾಚಾರ ಮಾಡಿ ದೌರ್ಜನ್ಯವೆಸಗಿದ ಆರೋಪಿಯನ್ನ ನಗರದ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೋರ ಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದೆ. ಇಸ್ಲಾಮ್ ಪರ್ವೇಜ್ ಎಂಬಾತನೇ ಈ ಕೃತ್ಯವೆಸಗಿರುವ ಆರೋಪಿ. ಪರ್ವೇಜ್ ಮನೆ ಕೆಲಸಕ್ಕೆಂದು ಬಿಹಾರದಿಂದ ಯುವತಿಯನ್ನ ಕರೆತಂದಿದ್ದ. ಬಳಿಕ ಕೋರಮಂಗಲದ ಮನೆಯೊಂದರಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಐರನ್ ಬಾಕ್ಸ್ ನಿಂದ ಸುಟ್ಟಿದ್ದಾನೆ.

ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ಇಸ್ಲಾಂ ಪರ್ವೇಜ್ ಮತ್ತು ಆತನ ಪತ್ನಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Key words: Bangalore- rape- girl-accused-arrest

 

 

website developers in mysore