ಕಲಾಪ ‘ಶೂಟ್ ‘ ಗೆ ನಿಷೇಧ : ಸ್ಪೀಕರ್ ಆದೇಶದ ವಿರುದ್ಧ ಪತ್ರಕರ್ತರ ಪ್ರತಿಭಟನೆ

 

ಬೆಂಗಳೂರು, ಅ.11, 2019 (www.justkannada.in news ): ವಿಧಾನಸಭೆ ಕಲಾಪಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿಯಂತ್ರಣ ಹೇರಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.

ಟಿವಿ ಮಾಧ್ಯಮಗಳ ನೇರಪ್ರಸಾರ ಮತ್ತು ಮಾಧ್ಯಮಗಳ ಫೋಟೋಗ್ರಾಫರ್ ಗಳಿಗೆ ನಿಷೇಧ ಹೇರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ. ಈ ನಿರ್ಧಾರ ಖಂಡಿಸಿ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು.
ನಗರದ ಮೌರ್ಯ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಟಿವಿ ಮತ್ತು ಮುದ್ರಣ ಮಾಧ್ಯಮದ ಸಂಪಾದಕರು, ಪತ್ರಕರ್ತರು ಭಾಗವಹಿಸಿ ಸರ್ಕಾರದ ಧೋರಣೆ ಖಂಡಿಸಿದರು.

ಎಚ್ಡಿಕೆ ಬೆಂಬಲ :

ಪತ್ರಕರ್ತರ ಪ್ರತಿಭಟನೆ ತಿಳಿದು ಸ್ಥಳಕ್ಕಾಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಧರಣಿಗೆ ಬೆಂಬಲ ಸೂಚಿಸಿದರು. ಪತ್ರಕರ್ತರು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೀರಿ. ಈ ರೀತಿಯ ತೀರ್ಮಾನ ಯಾವ ಸಂದರ್ಭದಲ್ಲಿಯೂ ಆಗಿರಲಿಲ್ಲ. ಮಾಧ್ಯಮಗಳನ್ನ ಹತ್ತಿಕ್ಕುವ ಕೆಲಸವನ್ನ ನಾನು ಸಿಎಂ ಆಗಿದ್ದಾಗ ಮಾಡಿರಲಿಲ್ಲ. ಅಧಿವೇಶನದಲ್ಲಿ ನಡೆಯುವುದನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತೀರಿ. ನಾಲ್ಕನೇ ಪಿಲ್ಲರ್ ಗೆ ಮುಕ್ತ ಅವಕಾಶ ಇರಬೇಕು ಎಂದರು.

ಪ್ರತಿಭಟನೆಯಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ದರಾಜು, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಪಬ್ಲಿಕ್ ಟಿವಿಯ ಎಚ್.ಆರ್,ರಂಗನಾಥ್, ಟಿವಿ-9ನ ರಂಗನಾಥ್ ಭರದ್ವಾಜ್, ಸುವರ್ಣ ಟಿವಿಯ ಅಜಿತ್ ಹನುಮಕ್ಕನವರ್, ಧಿಗ್ವಿಜಯ ಚಾನಲ್ ನ ಸುಭಾಷ್ ಹುಗಾರ್, ಆರ್.ಟಿ.ವಿಠಲಮೂರ್ತಿ ಮುಂತಾದವರು ಭಾಗವಹಿಸಿದ್ದರು.

key words : bangalore-media-ban-protest-against-speaker-kagere

————-