ಏ.6 ರಂದು ಬೆಂಗಳೂರು ಕರಗ ಶಕ್ತ್ಯೋತ್ಸವ, ಚೈತ್ರ ಪೂರ್ಣಿಮೆ.

kannada t-shirts

ಬೆಂಗಳೂರು,ಮಾರ್ಚ್,21,2023(www.justkannada.in):  ಈ ಬಾರಿ  ಮಾರ್ಚ್​​ 29ರಿಂದ ಕರಗ ಉತ್ಸವ ಆರಂಭವಾಗಿ, ಏಪ್ರಿಲ್​ 8ರವರೆಗೆ ನಡೆಯಲಿದ್ದು,  ಏಪ್ರಿಲ್ 6 ರಂದು ಬೆಂಗಳೂರು ಕರಗ ಶಕ್ತ್ಯೋತ್ಸವ ಚೈತ್ರ ಪೂರ್ಣಿಮೆ ನಡೆಯಲಿದೆ.

11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದ್ದು, ಈ ಬಾರಿಯು ಕರಗವನ್ನು ಅರ್ಚಕ ವಿ. ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಪೂಜಾರಿ ಜ್ಞಾನೇಂದ್ರ ಅವರು ಕಳೆದ 12 ವರ್ಷಗಳಿಂದ ಕರಗ ಹೊರುತ್ತಿದ್ದಾರೆ. ಕರಗ ರಾತ್ರಿ 12 ಗಂಟೆಗೆ ನಗರ ಪ್ರದಕ್ಷಿಣೆಗೆ ಹೊರಡಲಿದೆ.

ಮಾರ್ಚ್​. 29ರಂದು ಧ್ವಜಾರೋಹಣ ನಡೆಯುತ್ತದೆ. ನಂತರ ಏಪ್ರಿಲ್​ 8ರವರಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಏಪ್ರಿಲ್​​ 3 ರಂದು ಆರತಿ, ಏಪ್ರಿಲ್​​ 4 ರಂದು ಹಸಿಕರಗ, ಏಪ್ರಿಲ್​ 5 ರಂದು ಪೊಂಗಲ್​, ಮರುದಿನ 6 ರಂದು ಕರಗ ಉತ್ಸವ ನಡೆಯಲಿದೆ. ಇನ್ನು ವೀರಕುಮಾರರು, ತಿಗಳ ಸಮುದಾಯದ ಕೆಲ ಭಕ್ತರು ಕರಗ ನಡೆಯುವ 11 ದಿನಗಳ ಕಾಲ ಉಪವಾಸ ಇರುತ್ತಾರೆ.

Key words: Bangalore Karaga -Shaktyotsava -april.6- Chaitra Purnima.

website developers in mysore