ಜು,28 ರಂದು ಶಿವಪದ ರತ್ನಕೋಶ ಗ್ರಂಥ ಲೋಕಾರ್ಪಣೆ….

kannada t-shirts

ಬೆಂಗಳೂರು,ಜು,25,2020(www.justkannada.in):  ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ  (ಜೆಎಸ್ ಎಸ್) ಮಹಾವಿದ್ಯಾಪೀಠ ಹೊರತಂದಿರುವ ಶಿವಪದ ರತ್ನಕೋಶ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜು.28 ರಂದು ನಡೆಯಲಿದೆ.jk-logo-justkannada-logo

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಕಾರ್ಯಕ್ರಮದ ಬಗ್ಗೆ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ವಿವರ ನೀಡಿದರು.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಪ್ರಥಮ ಕೃತಿ ಸ್ವೀಕರಿಸಲಿದ್ದಾರೆ ಎಂದು ಡಾ.ಸಿ.ಜಿ.ಬೆಟಸೂರಮಠ ಅವರು  ಮಾಹಿತಿ ನೀಡಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೆಗೌಡ, ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಎ.ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀ ಕಂಠೇಗೌಡ, ಸಂದೇಶ್ ನಾಗರಾಜ್, ಆರ್.ಧರ್ಮಸೇನಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗ್ರಂಥದ ಸಂಪಾದಕ ಮಂಡಳಿಯ ವಿದ್ವಾಂಸರನ್ನು ಗೌರವಿಸಲಿದ್ದಾರೆ ಎಂದು ಡಾ.ಸಿ.ಜಿ.ಬೆಟಸೂರಮಠ ವಿವರಿಸಿದರು.

ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಠದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು, ಶ್ರೀ ಸಿದ್ಧಗಂಗಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಮ್ಮುಖದ ಕಾರ್ಯಕ್ರಮಕ್ಕೆ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಜೆಎಸ್ ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಸ್ತುತ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಹಾಗೂ ಗ್ರಂಥದ ಕಾರ್ಯನಿರ್ವಾಹಕ ಸಂಪಾದಕ ಡಾ. ಎಂ‌. ಎನ್.ನಂದೀಶ್ ಹಂಚೆ ಅವರು ಗ್ರಂಥದ ಕುರಿತು ಮಾತನಾಡಿ, ಜಗದ್ಗುರು ಶ್ರೀಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಗೌರವ ಸಂಪಾದಕತ್ವದ ಕೃತಿಯನ್ನು ಜೆಎಸ್ ಎಸ್ ಮಹಾವಿದ್ಯಾಪೀಠದ  ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯಿಂದ ‘ಶಿವಪದ ರತ್ನಕೋಶ’ವನ್ನು ಪ್ರಕಟಿಸಲಾಗಿದೆ. ಶ್ರೀಸಿದ್ದೇಶ್ವರ ಸ್ವಾಮಿಗಳು ಕಾಲಕಾಲಕ್ಕೆ ಸಲಹೆ ಸೂಚನೆ ನೀಡಿದ್ದಾರೆ. ಕೃತಿಯ ಮೂಲ ಆಕರ ಎನ್ನಬಹುದಾದ ಸಂಸ್ಕೃತ ವೀರಶೈವ ಪಾರಿಭಾಷಿಕ ಪದಕೋಶ 2011ರಲ್ಲಿ ಇದೇ ಸಂಸ್ಥೆಯಿಂದ ಪ್ರಕಟಿತವಾಗಿತ್ತು. ಇದರ ಕನ್ನಡ ಅನುವಾದದ ಜತೆಗೆ ವಚನ ಸಾಹಿತ್ಯ, ವೀರಶೈವ- ಲಿಂಗಾಯತ ಕಾವ್ಯಗಳು, ಹಾಗೂ ಇತರೆ ಕೃತಿಗಳನ್ನು ಸಮಗ್ರವಾಗಿ ಪರಿಶೀಲಿಸಿ ಪಾರಿಭಾಷಿಕ ಪದಗಳನ್ನು ಆಯ್ಕೆ ಮಾಡಿ ಗ್ರಂಥವನ್ನು ರಚಿಸಲಾಗಿದೆ. ಈ ಹಿಂದೆ ಪ್ರಕಟವಾಗಿದ್ದ ಇಂತಹ ಇತರ ಗ್ರಂಥಗಳನ್ನು ವಿವರವಾಗಿ ಪರಾಮರ್ಶಿಸಿ ಈ ಕೃತಿಯನ್ನು ಹೆಚ್ಚು ಪ್ರಸ್ತುತಗೊಳಿಸಲಾಗಿದೆ ಎಂದು ತಿಳಿಸಿದರು.Bangalore- JSS-Sivapada Ratnakosha- Grantha- June 28th

ಈ ಕೃತಿಯು ಭಾಷಾಶಾಸ್ತ್ರದ ತತ್ವಗಳಿಗೆ ಅನುಸಾರವಾಗಿ, ವೈಜ್ಞಾನಿಕ ವಾಗಿ, ಹಾಗೂ ಚಾರಿತ್ರಿಕ ವಿವರಣೆಗಳಿಂದ ಕೂಡಿದ್ದು ಪ್ರಮಾಣೀಭೂತವಾಗಿದೆ. ಸುಮಾರು ಒಂದು ಸಾವಿರ ಪುಟಗಳ ಮತ್ತು ಸುಮಾರು 40 ಸಾವಿರ ಪದಗಳನ್ನು ಒಳಗೊಂಡಿದೆ. ಇದುವರೆಗೆ ಬಂದಿರುವ ಬಹುತೇಕ ವೀರಶೈವ ಪಾರಿಭಾಷಿಕ ಪದಕೋಶಗಳಿಗಿಂತ ಭಿನ್ನವಾಗಿ ಹೆಚ್ಷಿನ ಅಧ್ಯಯನ ಸಾಮಗ್ರಿಯನ್ನು ಕೃತಿ ಒಳಗೊಂಡಿದೆ ಎಂದು ನಂದೀಶ್ ಹಂಚೆ ತಿಳಿಸಿದರು.

ನಾಡಿನ ಖ್ಯಾತ ವಿದ್ವಾಂಸರಾದ ಪ್ರೊ. ‌ಜಿ.ಎಸ್. ಸಿದ್ದಲಿಂಗಯ್ಯ, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ವಿದ್ವಾನ್ ಹೆಚ್.ವಿ.ನಾಗರಾಜರಾವ್, ಡಾ. ಎನ್.ಎಸ್.ತಾರಾನಾಥ್, ಡಾ.ಸಿ.ಶಿವಕುಮಾರ ಸ್ವಾಮಿ, ಆರ್.ಎಸ್.ಪೂರ್ಣಾನಂದ ಮತ್ತಿತರ ವಿದ್ವಾಂಸರ ಸಂಪಾದಕ ಮಂಡಳಿ ಈ ಕೃತಿಯ ಕಾರ್ಯವನ್ನು ನಿರ್ವಹಿಸಿದ್ದಾರೆ. ಸಾವಿರ ಪುಟಗಳ ಗ್ರಂಥದ ಮೂಲಬೆಲೆ ಸಾವಿರ ರೂ.ಗಳಾಗಿದ್ದು, ಜು.31ರವರೆಗೆ ಶೇ.50 ರಿಯಾಯಿತಿ ಬೆಲೆಯಲ್ಲಿ ಮೈಸೂರು ಹಾಗೂ ಬೆಂಗಳೂರಲ್ಲಿ ದೊರೆಯಲಿದೆ ಎಂದು ನಂದೀಶ್ ವಿವರಿಸಿದರು.

ಕೋವಿಡ್- 19 ಕಾರಣ ಕಾರ್ಯಕ್ರಮ ಆನ್ ಲೈನ್ ಮೂಲಕ ವ್ಯವಸ್ಥೆ ಮಾಡಲಾಗಿದೆ. ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು http://youtube.com/c/JSSMahavidyapeethaonline ಹಾಗೂ http://www.Facebook.com/JSSMVP ಮತ್ತು www.jssonline.org ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡಬಹುದಾಗಿದೆ.

Keywords: Bangalore- JSS-Sivapada Ratnakosha- Grantha- June 28th

website developers in mysore