ಬೆಂಗಳೂರಿಗೂ ಲಗ್ಗೆ ಇಟ್ಟ ಹಿಜಾಬ್ ವಿವಾದ: ಶಿಕ್ಷಕರ ಜತೆ ಫೋಷಕರಿಂದ ವಾಗ್ವಾದ.

ಬೆಂಗಳೂರು,ಫೆಬ್ರವರಿ,12,2022(www.justkannada.in):  ರಾಜ್ಯದ ಭಾರಿ ಗೊಂದಲವನ್ನುಂಟು ಮಾಡಿರುವ  ಹಿಜಾಬ್​ ವಿವಾದ ಇದೀಗ ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೂ  ಕಾಲಿಟ್ಟಿದೆ.

ನಗರದ ಚಂದ್ರಾ ಲೇಔಟ್​ನ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್  ಸಂಘರ್ಷ ಉಂಟಾಗಿದೆ.   ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದು ಈ ವೇಳೆ ಹಿಜಾಬ್ ಧರಿಸದಂತೆ ಶಿಕ್ಷಕರು ಸೂಚನೆ ನೀಡಿದರೆಂದು ತರಗತಿಗೆ ನುಗ್ಗಿ ಶಿಕ್ಷಕರ ಜತೆ ಪೋಷಕರು ವಾಗ್ವಾದ ನಡೆಸಿದ್ದಾರೆ.

7ನೇ ತರಗತಿ ಮಕ್ಕಳಿಗೆ ಶಿಕ್ಷಕರಿಂದ ಹಿಜಾಬ್ ವಿಚಾರವಾಗಿ ಕಿರುಕುಳ ನೀಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಸಂಘರ್ಷವಾಗುತ್ತಿದ್ದಂತೆ ಚಂದ್ರಾ ಲೇಔಟ್​ ನ ವಿದ್ಯಾಸಾಗರ್ ಶಾಲೆಗೆ ಪೊಲೀಸರು ದೌಡಾಯಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಈ ಮಧ್ಯೆ, ಹಿಜಾಬ್ ಬಗ್ಗೆ ಅಶ್ಲೀಲವಾಗಿ ಬರೆದಿರುವ ಆರೋಪ ಶಿಕ್ಷಕಿ ಮೇಲೆ ಕೇಳಿ ಬಂದಿದ್ದು,  ಅಶ್ಲೀಲವಾಗಿ ಬರೆದಿರುವ ಶಿಕ್ಷಕಿಯನ್ನ ಅಮಾನತು ಮಾಡುವಂತೆ ಮುಸ್ಲೀಂ ಮಹಿಳೆಯರು ಒತ್ತಾಯಿಸಿದ್ದಾರೆ. ಇನ್ನು ವಿದ್ಯಾಸಾಗರ ಪಬ್ಲಿಕ್ ಶಾಲೆಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,

ಬಳಿಕ ಮಾತನಾಡಿರುವ ಡಿಡಿಪಿಐ ರಾಜೇಂದ್ರ, ಶಿಕ್ಷಕಿ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದದ್ದು  ಶಾಲೆ ಒಳಗೆ ಬಂದಾಗ ಸಮವಸ್ತ್ರ ಧರಿಸಿಯೇ ಬರಬೇಕು.  ನಾನು ಏನು ಮಾತನಾಡಿಲ್ಲ ಬೋರ್ಡ್ ಮೇಲೆ ಅವಾಚ್ಯವಾಗಿ ಬರೆದಿಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ. ಶಿಕ್ಷಕರು ಮಕ್ಕಳಿಂದ ಮಾಹಿತಿ ಪಡೆದಿದ್ದೇನೆ ಎಂದಿದ್ದಾರೆ.

Key words: Bangalore-hijab- Controversy