ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಗಾಂಧಿ ನಮನ.

 

ಬೆಂಗಳೂರು, ಅ.02, 2021 : (www.justkannada.in news) ಮೌರ್ಯ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ ರಾತ್ರಿ 11:00 ಗಂಟೆಯಿಂದ ಮಧ್ಯರಾತ್ರಿ 01:00 ಗಂಟೆಯವರೆಗೆ ಗಾಂಧಿ ನಮನವನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಡಾ.ಪುಷ್ಪ ಅಮರನಾಥ್ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪುಷ್ಪ ಅಮರನಾಥ್ ರವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸುತ್ತ ಅವರ ಜನ್ಮದಿನವನ್ನು ರಾಷ್ಟ್ರಾದ್ಯಂತ ವಿಶೇಷವಾಗಿ ಆಚರಣೆ ಮಾಡುತ್ತೇವೆ. ಮಹಿಳೆಯರು ಮಧ್ಯರಾತ್ರಿ ರಸ್ತೆಯಲ್ಲಿ ಸ್ವಂತಂತ್ರರಾಗಿ ಓಡಾಡಿದ ದಿನದಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನವೆಂದು ಗಾಂಧೀಜಿ ಅವರು ಯಾವಾಗಲೂ ಹೇಳುತ್ತಿದ್ದರು. ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಕೊಲೆ, ಇನ್ನು ಮುಂತಾದ ದೌರ್ಜನ್ಯಗಳು ಅತಿಯಾಗಿದ್ದು, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ.

ದೇಶವನ್ನು ರಾಮ ರಾಜ್ಯವನ್ನಾಗಿ ಮಾಡುವ ಗಾಂಧೀಜಿ ಅವರ ಕನಸನ್ನು ನನಸು ಮಾಡುವಂತೆ ಬಿಜೆಪಿ ಸರ್ಕಾರಕ್ಕೆ ಎಚ್ಛರಿಸುತ್ತಾ, ಮಹಿಳೆಯರ ಮೇಲಿನ ಅತ್ಯಾಚಾರ ಹಾಗು ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಮಹಿಳೆಯರ ರಕ್ಷಣೆ ಕಡೆ ಗಮನ ಹರಿಸುವಂತೆ ಬಿಜೆಪಿ ಯನ್ನು ಎಚ್ಛರಿಸುವ ಸಲುವಾಗಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಇಂದು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ಮಾಲೆಯನ್ನು ಅರ್ಪಿಸಿ, ಮೋಂಬತ್ತಿಯನ್ನು ಹಚ್ಚಿ, ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸುತ್ತಾ, ಮಹಿಳಾ ವಿರೋಧಿ ಕತ್ತಲೆಯ ವಿರುದ್ಧ ಗಾಂಧಿ ತತ್ವವನ್ನು ಅರಿತು ಸತ್ಯದೆಡೆಗೆ ನಡೆಯಬೇಕು ಎಂದು ಮಧ್ಯರಾತ್ರಿ ಪಂಜನ್ನು ಹಿಡಿದು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಶಾಸಕಿ ಸೌಮ್ಯ ರೆಡ್ಡಿ, ತಬು ದಿನೇಶ್ ಗುಂಡೂರಾವ್, ಕುಸುಮಾ ಹನುಮಂತರಾಮಪ್ಪ, ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ, ಬೆಂಗಳೂರು ಉತ್ತರ-ದಕ್ಷಿಣ ಹಾಗು ಬೆಂಗಳೂರು ಕೇಂದ್ರ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರುಗಳು, ರಾಜ್ಯ ಪದಾಧಿಕಾರಿಗಳು ಮತ್ತು ಬ್ಲಾಕ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

key words : bangalore-gandhi-jayanthi-congress-puspa.amarnath