ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ.

ಬೆಂಗಳೂರು,ಮಾರ್ಚ್,14,2022(www.justkannada.in):  ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿಯಾಗಿದ್ದು, ಜಲಮಂಡಳಿ ಅಗೆದಿದ್ದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನ ಎಂ ಎಸ್ ಪಾಳ್ಯದ ಮುನೇಶ್ವರ ದೇವಸ್ಥಾನದ ಬಳಿಯಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರ ಅಶ್ವಿನ್ (27 ) ಮೃತಪಟ್ಟ ಯುವಕ.  ಜಲಮಂಡಳಿಯಿಂದ ಪೈಪ್ ಲೈನ್ ತೆಗೆಯಲಾಗಿತ್ತು.  ಬೈಕ್ ಚಲಾಯಿಸುತ್ತಿದ್ದ ವೇಳೆ ಅಶ್ವಿನ್ ಗೆ ಈ ಗುಂಡಿ ಕಾಣದೇ ಬಿದ್ದು ಗಂಭೀರ ಗಾಯಗೊಂಡಿದ್ದರು.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ  ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ. ಅಶ್ವಿನ್ ಇಂದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Key words: Bangalore-death- bike-rider