ಲೇಔಟ್ ಅಪ್ರೂವಲ್, ಭೂ ಪರಿವರ್ತನೆ ಲೈಸೆನ್ಸ್‌ಗೆ ಬಂದಿದೆ ಈಗ ಏಕ ಗವಾಕ್ಷಿ ವೆಬ್ ಸೈಟ್ …

 

ಬೆಂಗಳೂರು, ಜೂ.13, 2019 : (www.justkannada.in news ) ವಿಧಾನ ಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂಮಿ ಮತ್ತು ಕಟ್ಟಡ ನಕ್ಷೆ ಅನುಮೋದನೆ ತಂತ್ರಾಂಶ ಹಾಗೂ ವೆಬ್‌ಸೈಟ್‌ಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ.

ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್, ಮೇಯರ್ ಗಂಗಾಭಿಕ ಮಲ್ಲಿಕಾರ್ಜುನ ಭಾಗಿ. ಸಚಿವ ಯು.ಟಿ.ಖಾದರ್ ಮಾತನಾಡಿ,
ನಗರದ ಅಭಿವೃದ್ಧಿಗೆ ಕಟ್ಟಡ ನಕ್ಷೆ ಅನುಮೋದನೆ ಬಹಳ ಮುಖ್ಯ ಆಗ್ತದೆ. ಹಾಗಾಗಿ ಕಟ್ಟಡ ಲೈಸೆನ್ಸ್ ಇಲಾಖೆಗಳಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ವೆಬ್‌ಸೈಟ್ ತರಲಾಗಿದೆ. 14 ಕಡೆಗಳ ಲೈಸೆನ್ಸ್ ಅನ್ನು ಒಂದೇ ಕಡೆ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ. ಲೇಔಟ್ ಅಪ್ರೂವಲ್, ಭೂ ಪರಿವರ್ತನೆ ಲೈಸೆನ್ಸ್‌ಗೂ ವೆಬ್‌ಸೈಟ್ ಅನುಕೂಲಕರವಾಗಿದೆ. ಮುಂದಿನ ದಿನಗಳಲ್ಲಿ ರೇರಾವನ್ನು ಈ ವೆಬ್‌ಸೈಟ್ ಗೆ ಜೋಡಿಸಲಾಗುವುದು. ಅತೀ ಶ್ರೀಘ್ರದಲ್ಲೇ ಪೇಯಿಂಗ್ ಗೆಸ್ಟ್ ಪಾಲಿಸಿಯನ್ನು ಜಾರಿಗೆ ತರಲಾಗುವುದು..

ರಾಜ್ಯದಲ್ಲಿ ಭೂಮಿಗೆ ಸಂಬಂಧಿಸಿದ ಮತ್ತು ಕಟ್ಟಡ ನಕ್ಷೆಗಳ ಲೈಸೆನ್ಸ್ ಸರಳಗೊಳಿಸಲಾಗಿದೆ. ಸಮಯ ವ್ಯರ್ಥ ಮಾಡದೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡದ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಸಬ್ ಹರ್ಬನ್ ರೈಲ್ವೇಗೂ ಕೆಲವೇ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

—-

key words : bangalore-cm-kumaraswamy-website-layout-approval-real.estate