ನೀವು ಈಗಲೇ ಅಡ್ರೆಸ್ ಇಲ್ಲದಂತಾಗಿದ್ದೀರಿ: ಇನ್ನು ಮೂರೂವರೆ ವರ್ಷ ನನ್ನನ್ನು ಏನೂ ಮಾಡಕ್ಕಾಗಲ್ಲ- ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ಬಿಎಸ್ ವೈ ತಿರುಗೇಟು…

kannada t-shirts

ಬೆಂಗಳೂರು,ಡಿ,22,2019(www.justkannada.in):  ಯಡಿಯೂರಪ್ಪ ಅಧಿಕಾರದಲ್ಲಿ ಎಷ್ಟು ದಿನ ಇರ್ತಾರೆ ನೋಡೋಣ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಮೂರೂವರೆ ವರ್ಷ ನನ್ನನ್ನು ಏನೂ ಮಾಡಕ್ಕಾಗಲ್ಲ. ನೀವು ಈಗಲೇ ಅಡ್ರೆಸ್ ಗೆ ಇಲ್ಲದಂತಾಗಿದೀರಿ. ಮೂರುವರೆ ವರ್ಷ ಆದ ಮೇಲೆ ನಿಮ್ಮ‌ ಪರಿಸ್ಥಿತಿ ಹೇಗಾಗಿರುತ್ತೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಪೌರತ್ವ ತಿದ್ದುಪಡಿ‌ ಕಾಯ್ದೆ ಸುದೀರ್ಘ ಚರ್ಚೆ ಬಳಿಕ ಪಾಸಾಗಿದೆ. ಮಂಗಳೂರಿನಲ್ಲಿ ಪ್ರತಿಭಟನೆಗೆ ಬಂದಿದ್ರು, ಯುದ್ದಕ್ಕೆ ಬಂದಿರಲಿಲ್ಲ. ಕೇರಳದವರು ಮನುಷ್ಯರಲ್ವಾ, ಅವರು ಪ್ರತಿಭಟಿಸಬಾರದಾ ಅಂತ ಕುಮಾರಸ್ವಾಮಿ ಕೇಳಿದ್ದಾರೆ. ಮಂಗಳೂರಿನಲ್ಲಿ ಕಲ್ಲು ತೂರಾಟ ಮಾಡಿದ್ದು ಅವರು. ಪೊಲೀಸ್ ಶಸ್ತ್ರಾಸ್ತ್ರಗಾರಕ್ಕೆ ನುಗ್ಗಲು ಪ್ರಯತ್ನ ಮಾಡಿದ್ದು ಅದೇ ಪ್ರತಿಭಟನಾಕಾರರು. ಕುಮಾರಸ್ವಾಮಿ ದುರುದ್ದೇಶದಿಂದ ಮಾತಾಡ್ತಿದಾರೆ. ಅಲ್ಪಸಂಖ್ಯಾತರ ದಾರಿ‌ತಪ್ಪಿಸುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಎಎ, ಎನ್ ಆರ್ ಸಿ‌ಯ ಉದ್ದೇಶಗಳನ್ನು ಜನರಿಗೆ ತಿಳಿಸಿ.  ಮೊದಲು ಕಾಯ್ದೆ ಬಗ್ಗೆ ಜನರಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅರಿವು ಹುಟ್ಟಿಸಲಿ. ಇದನ್ನ ಮಾಡದೇ ಜನರಲ್ಲಿ ಗೊಂದಲ ಹುಟ್ಟಿಸುವುದನ್ನು ನಾನು‌ ಖಂಡಿಸುತ್ತೇನೆ ಎಂದು ಕಿಡಿಕಾರಿದರು.

ಮಂಗಳೂರಿನಲ್ಲಿ ನಾನು ಮುಸ್ಲಿಂ ಮುಖಂಡರು, ಧರ್ಮ ಗುರುಗಳ ಜೊತೆ ಮಾತಾಡಿದೆ. ಯಾರೂ ಕಾಯ್ದೆ ವಿರೋಧಿಸಿ ಮಾತಾಡಲಿಲ್ಲ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಇಲ್ಲ. ಪೌರತ್ವ ಕಾಯ್ದೆ ಬಗ್ಗೆ ಎರಡೂ ಸದನಗಳಲ್ಲೂ ಸವಿಸ್ತಾರವಾಗಿ ಚರ್ಚೆ ಆದ ಮೇಲೆ ಜಾರಿಯಾಗಿದೆ. ಕಾಯ್ದೆಯಿಂದ ಭಾರತದ ಮುಸ್ಲಿಮರಿಗೆ ತೊಂದರೆ ಆಗಲ್ಲ. ಇದನ್ನು ವಿಪಕ್ಷಗಳು ಅರ್ಥ ಮಾಡಿಕೊಳ್ಳಲಿ. ಮನಮೋಹನ್ ಸಿಂಗ್ ಹಿಂದೆಯೇ ಇದರ ಬಗ್ಗೆ ಮಾತಾಡಿದ್ರು. ಈಗ ಮನಮೋಹನ್ ಸಿಂಗ್ ಇನ್ನೂ ಮಾತಾಡಿಲ್ಲ. ಗೊಂದಲ ಹುಟ್ಟಿಸ್ತಿರೋದು ಯಾಕೆ ? ಮಂಗಳೂರಲ್ಲಿ ನಿನ್ನೆ ಸ್ವಲ್ಪ ವ್ಯತ್ಯಾಸ ಆಗಿದ್ರೆ ದೊಡ್ಡ ಅನಾಹುತ ಆಗ್ತಿತ್ತು ಎಂದು ಸಿಎಂ ಬಿಎಸ್ ವೈ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡವರು ಬಂದು ಕಲ್ಲು ಎಸೆದ್ರು. ಹೊರಗಿಂದ ಬಂದವರಾದ ಅವರಿಗೆ‌ ಮಂಗಳೂರಿನಲ್ಲಿ ಏನು ಕೆಲಸ?. ಪ್ರಚೋದನೆಯಿಂದಾಗಿ ಹೊರಗಿಂದ ಬಂದವರು ಜನರ ಮಧ್ಯೆ ಸೇರ್ಕೊಂಡು ಕಲ್ಲು ಎಸೆದ್ರು. ಗೋಲಿಬಾರ್ ಕುರಿತು ಯಾವ ತನಿಖೆ ಅಂತ ಇನ್ನೂ ನಿರ್ಧರಿಸಿಲ್ಲ. ಗೃಹ ಸಚಿವರು ಚಿಕ್ಕಮಗಳೂರಿ ಗೆ ಹೋಗಿದ್ದಾರೆ. ಗೃಹಸಚಿವರು ಬಂದ ಮೇಲೆ  ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words: Bangalore-  CM BS Yeddyurappa- tong-former cm-HD Kumaraswamy.

 

website developers in mysore