ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 50 ಲಕ್ಷ ಮೌಲ್ಯದ ಗಾಂಜಾ ವಶ: ಮೂವರು ಅಂದರ್…

kannada t-shirts

ಬೆಂಗಳೂರು,ಸೆಪ್ಟಂಬರ್,17,2020(www.justkannada.in):  ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 50 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.jk-logo-justkannada-logo

ಅಜಾಂಪಾಷಾ, ಮಸ್ತಾನ್, ಮೊಹಮ್ಮದ್ ಅಬ್ಬಾಸ್ ಬಂಧಿತ ಆರೋಪಿಗಳು. ಬಂಧಿತರ ಬಳಿ ಇದ್ದ 50 ಲಕ್ಷ ಮೌಲ್ಯದ 90 ಕೆ.ಜಿ  ಗಾಂಜಾ, ಕಾರು, ಒಂದು ತೂಕದ ಯಂತ್ರವನ್ನ ವಶಕ್ಕೆ ಪಡೆದಿದ್ದಾರೆ.  ಬಂಧಿತ ಆರೋಪಿಗಳು ವಿಶಾಖಪಟ್ಟಣದಿಂದ ಗಾಂಜಾ ತಂದಿದ್ದರು ಎನ್ನಲಾಗಿದೆ.bangalore-ccb-police-worth-rs-50-lakh-marijuana-seized

ಈ ಕುರಿತು ಖಚಿತ ಮಾಹಿತಿ ಮೇರೆಗೆ ಕಾಡಗೋಡಿಯಲ್ಲಿದ್ದ ಆರೋಪಿ ಅಜಾಂಪಾಷಾ ಅಪಾರ್ಟ್ ಮೆಂಟ್ ಫ್ಲ್ಯಾಟ್  ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು ಈ ಕುರಿತು ಕಾಡಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bangalore-CCB- police – worth Rs 50 lakh – Marijuana-seized

 

website developers in mysore