ಪ್ರತಿ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತರ ಪಟ್ಟಿಯನ್ನೂ ಹೈಕಮಾಂಡ್ ತರಿಸಿಕೊಂಡಿರುತ್ತೆ- ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿಕೆ…

ಬೆಂಗಳೂರು,ಜೂ,9,2020(www.justkannada.in):  ರಾಜ್ಯಸಭೆ ಚುನಾವಣೆಗೆ ಇಬ್ಬರು ಬಿಜೆಪಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿರುವ ಸಂಬಂಧ ಕೇಂದ್ರದ ನಿರ್ಧಾರ ಕಾರ್ಯಕರ್ತರಿಗೆ ಹುಮ್ಮಸ್ಸು, ಶಕ್ತಿ ತಂದು ಕೊಟ್ಟಿದೆ ಎಂದು ರೈಲ್ವೆ ರಾಜ್ಯಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.bangalore-bjp-central-minister-suresh-angadi-rajyasabha-election

ಬಿಜೆಪಿ ಕಚೇರಿಯಲ್ಲಿ ಇಂದು ಮಾತನಾಡಿದ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ರಾಜ್ಯಸಭೆ ಚುನಾವಣೆಗೆ ಪ್ರಭಾಕರ್ ಕೋರೆ, ರಮೇಶ್ ಕತ್ತಿ, ಪ್ರಕಾಶ್ ಶೆಟ್ಟಿ ಸ್ಪರ್ಧೆಯಲ್ಲಿದ್ದರು. ಆದರೆ ರಾಜ್ಯದವರು ಕಳಿಸಿಕೊಟ್ಟ ಲಿಸ್ಟ್ ಒಂದು ಕಡೆಯಾದರೆ. ಪ್ರತಿ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತರ ಪಟ್ಟಿಯನ್ನೂ ಹೈಕಮಾಂಡ್ ತರಿಸಿಕೊಂಡಿರುತ್ತದೆ. ಹೀಗಾಗಿ ಸಾಮಾನ್ಯ ಕಾರ್ಯಕರ್ತನಿಗೆ  ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರದ ನಿರ್ಧಾರ ಕಾರ್ಯಕರ್ತರಿಗೆ ಹುಮ್ಮಸ್ಸು, ಶಕ್ತಿ ತಂದು ಕೊಟ್ಟಿದೆ. ಪಕ್ಷದ ವರಿಷ್ಠರು ಈರಣ್ಣ ಕಡಾಡಿಯವರಿಗೆ ಟಿಕೆಟ್ ನೀಡುವ ನಿರ್ಧಾರ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ  ಟಿಕೆಟ್ ನೀಡಲಾಗಿದೆ. ಬಹಳಷ್ಟು ಜನ ಅಪೇಕ್ಷಿತರಿರುತ್ತಾರೆ. ಆದರೆ ಪಕ್ಷದ ಹೈಕಮಾಂಡ್ ನಿರ್ಧಾರ ಇದು. ನಾನು ನಿನ್ನೆ ರಮೇಶ್ ಕತ್ತಿ, ಪ್ರಭಾಕರ್  ಕೋರೆ ಜೊತೆ ಮಾತಾಡಿದ್ದೇನೆ. ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಸುರೇಶ್ ಅಂಗಡಿ ತಿಳಿಸಿದರು.

Key words: Bangalore- bjp-central minister-suresh angadi-rajyasabha-election