ಕಚೇರಿಯಲ್ಲಿ ಚಿತ್ರೀಕರಣ ನಿಷೇಧ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ: ಹಿಂದಿನ ನಿಯಮವೇ ಜಾರಿ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಜುಲೈ,16,2022(www.justkannada.in):  ಸರ್ಕಾರಿ ಕಚೇರಿಗಳಲ್ಲಿ ಪೋಟೊ, ವಿಡಿಯೋ ಚಿತ್ರೀಕರಣ ನಿಷೇಧದ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಇದೀಗ ಆದೇಶ ವಾಪಸ್ ಪಡೆಯಲಾಗಿದ್ದು ಹಿಂದಿನ ನಿಯಮವೇ ಜಾರಿಯಲ್ಲಿರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರಿ ಕಚೇರಿಯಲ್ಲಿ ಚಿತ್ರೀಕರಣ ನಿಷೇಧ ವಾಪಸ್ ಪಡೆಯಲಾಗಿದೆ. ಹೆಣ್ಣುಮಕ್ಕಳ ಪೋಟೋ ವಿಡಿಯೋ ಮಾಡ್ತಾರೆ. ಪೋಟೋ ವಿಡಿಯೋ ಚಿತ್ರೀಕರಣ ಬಂದ್ ಮಾಡಿ ಅಂತಾ ನೌಕರರು ಮನವಿ ಮಾಡಿದ್ದರು. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ರೀತಿ ನಿರ್ಬಂಧ ಹಾಕಬಾರದು ಹಿಂದಿನ ನಿಯಮವೇ ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಹಲವೆಡೆ ಮಳೆ ಹಾನ ಹಿನ್ನೆಲೆ ನಿನ್ನೆ ಡಿಸಿಗಳ ಜತೆ ಚರ್ಚಸಿದ್ದೇನೆ. ಮಳೆಗೆ ಮನೆ ಹಾನಿಯಾಗಿದ್ದರೇ ತಕ್ಷಣ ಪರಿಹಾರ ನೀಡಲಾಗುತ್ತದೆ. ಮೂಲ ಸೌಕರ್ಯಕ್ಕೆ 500 ಕೋಟಿ ಒದಗಿಸಿದ್ದೇನೆ. ಸಂತ್ರಸ್ಥರ ನೆರವಿಗೆ ನಮ್ಮ ಸರ್ಕಾರ ಧಾವಿಸಲಿದೆ ಎಂದರು.

Key words: ban –photo-video-office-order-cancel-CM Basavaraja Bommai.

ENGLISH SUMMARY…

Prohibition of taking pictures, and videos in govt. offices had not come to my notice: Will revert it – CM Bommai
Bengaluru, July 16, 2022 (www.justkannada.in): Chief Minister Basavaraj Bommai today informed that the orders prohibiting taking pictures and videos by visitors to government officials had not come to his notice. “We have withdrawn the orders, and the older rules will continue,” he informed.
Speaking to the press persons in Bengaluru today, the Chief Minister informed that a few visitors to the government officials take pictures and videos of women employees and hence the employees had requested to prohibit it. “Our government is functioning most transparently. However, we have removed the restriction,” he added.
Replying to a question about rain, the CM explained that he had spoken to the Deputy Commissioners and informed them that measures would be taken immediately to distribute compensation to the victims who lose their houses due to rains. “I have allocated Rs. 500 crores for infrastructure development. Our government is here to help the victims of natural disasters,” he said.
Keywords: Chief Minister Basavaraj Bommai/ prohibition of pictures, videos/ government offices/ orders withdrawn