ಕೋವಿಡ್ ಟೆಸ್ಟ್ ಮಾಡಿಸಲು ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು…

Promotion

ಬಳ್ಳಾರಿ,ಜು,23,2020(www.justkannada.in):  ಕೋವಿಡ್ ಟೆಸ್ಟ್ ಮಾಡಿಸಲು  ಬಂದು ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ತೋರಣಗಲ್ ನಲ್ಲಿ ನಡೆದಿದೆ.jk-logo-justkannada-logo

ತೋರಣಗಲ್ ಒಪಿಜಿ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. 58 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. 58 ವರ್ಷದ ವ್ಯಕ್ತಿ ತೋರಣಗಲ್ ಕಂಟೇನ್ಮೆಂಟ್ ಜೋನ್ ನಿವಾಸಿಯಾಗಿದ್ದು, ನಿನ್ನೆ ಕೋವಿಡ್ ಟೆಸ್ಟ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿ ಶೀತ, ಜ್ವರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇನ್ನು  ವ್ಯಕ್ತಿಗೆ ಟೆಸ್ಟ್ ಮಾಡಿದ ಬಳಿಕ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು ಮೃತದೇಹವನ್ನ ಸಂಬಂಧಿಕರಿಗೆ ನೀಡದೇ ಅಂತ್ಯ ಸಂಸ್ಕಾರ ಮಾಡಲಾಗಿದೆ.

Key words: ballari- corona- person-death