ಮರಿಯಮ್ಮನಹಳ್ಳಿ ಬಳಿ ಕಾರು ಅಪಘಾತ ಪ್ರಕರಣ: ರಾತ್ರೋರಾತ್ರಿ ಪೋಸ್ಟ್ ಮಾರ್ಟಂ ಮಾಡಿದ್ದೇಕೆ..? ಕಾರಣ ಬಿಚ್ಚಿಟ್ಟ ವೈದ್ಯರು…

ಬಳ್ಳಾರಿ,ಫೆ,13,2020(www.justkannada.in):  ಬಳ್ಳಾರಿಯಲ್ಲಿ ಮರಿಯಮ್ಮನಹಳ್ಳಿ ಬಳಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರೋರಾತ್ರಿ ಮೃತ ಸಚಿನ್ ಮೃತದೇಹ ಪೋಸ್ಟಮಾರ್ಟಂ ಮಾಡಿದ್ದಕ್ಕೆ ಹೊಸಪೇಟೆ ತಾಲ್ಲೂಕು ವೈದ್ಯಾಧಿಕಾರಿ ಮಹಂತೇಶ್ ಕಾರಣ ಬಿಚ್ಚಿಟ್ಟಿದ್ದಾರೆ .

ಈ ಬಗ್ಗೆ  ಮಾತನಾಡಿರುವ ವೈದ್ಯಾಧಿಕಾರಿ ಮಹಂತೇಶ್,   ಫೆ.10ರಂದು ಅಪಘಾತದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಸಚಿನ್ ರನ್ನು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ತರುವ ವೇಳೆಗಾಗಲೇ ಆತ ಮೃತಪಟ್ಟಿದ್ದ.  ಈ ಸಮಯದಲ್ಲಿ ತಾವು ಸಚಿವ ಆರ್.ಅಶೋಕ್ ಕಡೆಯವರು ಎಂದು ತಿಳಿಸಿದ್ರು. ಹೀಗಾಗಿ ತಕ್ಷಣವೇ ಅವರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಅಲ್ಲದೆ ಅಂದೇ ರಾತ್ರೋರಾತ್ರಿ ಪೋಸ್ಟ್ ಮಾರ್ಟಂ ಮಾಡಲಾಯಿತು ಎಂದು ತಿಳಿಸಿದ್ದಾರೆ.

ರಾಕೇಶ್ ಎಂಬವರಿಗೆ ಬೆನ್ನು ಮೂಳೆ ಮುರಿದಿತ್ತು. ಹೀಗಾಗಿ ಎಂಆರ್ ಐ ಮಾಡಿ ನಂತರ ಬೆಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದ್ದವು. ಬಳಿಕ ಬೆಳಿಗ್ಗೆ ಅವರನ್ನ ಬೆಂಗಳೂರಿಗೆ ಕರೆದೊಯ್ದರು. ಇನ್ನು ರಾಹುಲ್ ಹಾಗೂ ಶಿವಕುಮಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಕಳುಹಿಸಿ ಕೊಡಲಾಯಿತು ಕಾರಿನಲ್ಲಿದ್ದ ವರುಣ್ ಎಂಬುವವರಿಗೆ ಗಾಯಗಳಾಗಿರಲಿಲ್ಲ ಹೀಗಾಗಿ  ಅವರು ಚಿಕಿತ್ಸೆ ಬೇಡ ಎಂದು ಹೇಳಿದವು ಆರ್.ಅಶೋಕ್ ಅವರ ಹೆಸರು ಹೇಳಿದ್ದರಿಂದ ಸಚಿನ್ ಮೃತದೇಹವನ್ನ ರಾತ್ರೋರಾತ್ರಿ 3.30ಕ್ಕೆ ತರಾತುರಿಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಯಿತು ಎಂದು ತಿಳಿಸಿದರು.

Key words: ballari-car-accident –case-  Post mortem -night -doctor.