ಬಕ್ರೀದ್ ಹಬ್ಬ ಹಿನ್ನೆಲೆ: ನಿಯಮ ಮೀರಿದ್ರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಬೆಂಗಳೂರು ಡಿಸಿ ಶ್ರೀನಿವಾಸ್…

ಬೆಂಗಳೂರು,ಆ,7,2019(www.justkannada.in): ಬಕ್ರೀದ್ ಹಬ್ಬ ಹಿನ್ನೆಲೆ, ಒಂಟೆಯನ್ನ ಯಾವುದೇ ಕಾರಣಕ್ಕೂ ಕಡಿಯುವಂತಿಲ್ಲ. ನಿಯಮ ಮೀರಿದ್ರೆ ಕ್ರಮ ಕೈಗೊಳ್ಳುವುದಾಗಿ  ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಬಕ್ರಿದ್ ಹಬ್ಬ ಹಿನ್ನೆಲೆ ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಯಿತು. ಇಲ್ಲೀಗಲ್ ಸ್ಲಾಟರಿಂಗ್ ತಡೆಯುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಿತು.

ಈ ವೇಳೆ ಮಾತನಾಡಿದ ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್, ಬೆಂಗಳೂರಿನಲ್ಲಿ ಅಧಿಕೃತವಾಗಿ ಒಂದೇ ಸ್ಲಾಟರಿಂಗ್ ಸ್ಥಳವಿದೆ.ಅನಧಿಕೃತವಾಗಿ ಯಾವುದೇ ಪ್ರಣಿಗಳ ವಧೆಗೆ ಸ್ಥಳವಿಲ್ಲ. ಪ್ರಾಣಿಗಳನ್ನ ಕೊಂಡೊಯ್ಯುವಾಗ ವಾಹನ ತಡೆದು ತೊಂದರೆ ನೀಡುತ್ತಿದ್ದಾರೆ ಅಂತ ಆರೋಪವಿದೆ. ಹಬ್ಬ ಮಾಡಲು ನಮ್ಮಿಂದ ಯಾವುದೇ ವಿರೋಧವಿಲ್ಲ. ಆದರೆ ಒಂಟೆಯನ್ನ ಯಾವುದೇ ಕಾರಣಕ್ಕೂ ಕಡಿಯುವಂತಿಲ್ಲ. ನಿಯಮ ಮೀರಿದ್ರೆ ಕ್ರಮ ಕೈಗೊಳ್ಳೋದಾಗಿ  ಎಚ್ಚರಿಕೆ ನೀಡಿದರು.

ಸ್ವಾತಂತ್ರ್ಯ ದಿನದ ಅಂಗವಾಗಿ ಸಭೆ..

ಹಾಗೆಯೇ ಆಗಸ್ಟ್ 15 ರಂದು ಸ್ವಾತಂತ್ರದಿನದ ಅಂಗವಾಗಿ ಸಭೆ ನಡೆಯಿತು. ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ  ಮಾತನಾಡಿದ  ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್, ಪ್ರತಿ ವರ್ಷದಂತೆ ಈ ವರ್ಷವೂ ಮಾಣಿಕಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಸಿಎಂ ಧ್ವಜಾರೋಹಣ ನೆರವೇರಿಸಲಿದ್ದು 15 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ.  ಆಗಸ್ಟ್ 9,10,12,13 ಸಾಂಸ್ಕೃತಿಕ ಕಾರ್ಯಕ್ರಮ, ಪಥ ಸಂಚಲನದ  ರಿಹರ್ಸಲ್ ನಡೆಯಲಿದೆ. ಭದ್ರತೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಜೊತೆ ಚರ್ಚಿಸಲಾಗಿದೆ. ಮೆಟ್ರೋ ಕಾಮಗಾರಿ ನಡೆಯುತ್ತಿರೋ ಹಿನ್ನೆಲೆ ಪಾರ್ಕಿಂಗ್ ವ್ಯವಸ್ಥೆ ಎರಡು ಕಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಐಎಂಎ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶ್ರೀನಿವಾಸ್ , ಬೆಂಗಳೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ. ಐದು ಜಿಲ್ಲೆಗಳಲ್ಲಿ ಮನ್ಸೂರ್ ಆಸ್ತಿ ಪತ್ತೆ ಹಚ್ಚಲಾಗಿದೆ. 23 ಆಸ್ತಿಗಳನ್ನ ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 300 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ತಿಳಿಸಿದರು.

keywords: Bakreid festival- Bengaluru DC- Srinivas- warned – violating rules.