ಜಾಮೀನು ಅರ್ಜಿ ವಿಚಾರಣೆ: ಇಂದು ನಿರ್ಧಾರವಾಗಲಿದೆ ಮಾಜಿ ಸಚಿವ ಡಿ.ಕೆ ಶಿವಕುಮಾರ್  ಭವಿಷ್ಯ…

ಬೆಂಗಳೂರು,ಸೆ,18,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದ್ದು ಡಿಕೆ ಶಿವಕುಮಾರ್ ಗೆ ಬೇಲ್ ಸಿಗುತ್ತೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ.

ನಿನ್ನೆ ಇಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಹಾಜರುಪಡಿಸಲಾಗಿತ್ತು. ಕೋರ್ಟ್ ನಿನ್ನೆ ಜಾಮೀನು ಅರ್ಜಿ ವಿಚಾರಣೆಯನ್ನ ಇಂದಿಗೆ ಮುಂದೂಡಿತ್ತು. ಇದೀಗ ಇಂದು ಮಧ್ಯಾಹ್ನ ವಿಚಾರಣೆ ನಡೆಯಲಿದ್ದು. ವಿಶೇಷ ಕೋರ್ಟ್ ನಿರ್ಧಾರದ ಮೇಲೆ ಮಾಜಿ ಸಚಿವ ಡಿಕೆಶಿ ಭವಿಷ್ಯ ನಿಂತಿದೆ.

ರಕ್ತದೊತ್ತಡ ಶುಗರ್ ಹಿನ್ನೆಲೆ ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿಯ ಆರ್ ಎಂ ಎಲ್ ಆಸ್ಪತ್ರೆಯಲ್ಲಿ ಚಿಕತ್ಸೆ ನೀಡಲಾಗುತ್ತಿದ್ದು, ಇಂದು ವೈದ್ಯರ  ವರದಿ ಮೇಲೆ ಡಿ.ಕೆ ಶಿವಕುಮಾರ್ ಆಸ್ಪತ್ರೆಗೊ ? ಅಥವಾ ಜೈಲಿಗಾ ? ಎಂಬುದು ತಿಳಿಯಲಿದೆ.

ಡಿಕೆಶಿ ಅವರನ್ನ  ಅಕ್ಟೋಬರ್ ಒಂದರ ವರೆಗೆ ತಿಹಾರ್ ಜೈಲಿನಲ್ಲಿ ಇರುಸುವಂತೆ ಕೋರ್ಟ್ ಸೂಚಿಸಿತ್ತು. ಡಿ ಕೆ ಶಿವ ಕುಮಾರ್ ಗೆ ಅನಾರೋಗ್ಯ ಹಿನ್ನೆಲೆ ವಿಚಾರಣೆ ಪೂರ್ತಿ ಮಾಡಲು ಆಗಿಲ್ಲ ಎಂದಿದ್ದ ಇಡಿ ಪರ ವಕೀಲ ವಾದಮಂಡಿಸಿದ್ದರು. ಹಾಗೆಯೇ ಅನಾರೋಗ್ಯದ ಹಿನ್ನೆಲೆ ಜಾಮೀನಿನ ಮೇಲೆ ಡಿಕೆ ಶಿವಕುಮಾರ್ ಅವರನ್ನ ಬಿಡುಗಡೆಗೊಳಿಸುವಂತೆಬ ಡಿಕೆಶಿ ಪರ ವಕೀಲರು ಕೋರಿದ್ದರು. ಇಂದು ಮತ್ತೊಮ್ಮೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Key words: Bail application –hearing-Former Minister -DK Shivakumar’s- fate – decided- today …