ಲಂಡನ್ ಊಬರ್ ಕ್ಯಾಬ್’ನಲ್ಲಾದ ಘಟನೆಯಿಂದ ಬೆಚ್ಚಿಬಿದ್ದ ಸೋನಂ ಕಪೂರ್

ಬೆಂಗಳೂರು, ಜನವರಿ 1, 2019 (www.justkannada.in): ನಟಿ ಸೋನಂ ಕಪೂರ್ ಊಬರ್ ಕ್ಯಾಬ್ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ.

ಕ್ಯಾಬ್ ನಲ್ಲಿ ಒಂದು ಭಯಾನಕ ಅನುಭವವಾಗಿರುವುದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಕ್ಯಾಬ್ ಅನ್ನು ತೆಗೆದುಕೊಳ್ಳುವ ಮೊದಲು ಜನರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

ಸೋನಂ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಸಂಬಂಧ ಟ್ವೀಟ್ ಮಾಡಿ, ‘ಸ್ನೇಹಿತರೇ, ನಾನು ಲಂಡನ್‌ನ Uber ಕ್ಯಾಬ್‌ನಲ್ಲಿ ಬಹಳ ಭಯಾನಕ ಕ್ಷಣವನ್ನು ಹೊಂದಿದ್ದೇನೆ. ಆ ಕ್ಷಣ ನನ್ನನ್ನು ಬೆಚ್ಚಿ ಬೀಳಿಸಿತು.

ದಯವಿಟ್ಟು ನೀವೆಲ್ಲರೂ ಈ ಬಗ್ಗೆ ಜಾಗರೂಕರಾಗಿರಿ. ನಗರದ ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳುವುದು ಉತ್ತಮ ಮತ್ತು ಸುರಕ್ಷಿತ ಮಾರ್ಗವಾಗಿದೆ’ ಎಂದು ಬರೆದಿದ್ದಾರೆ.