ಬಬ್ರು’ ವಾಹನದಲ್ಲೊಂದು ‘ಭಯಾ’ನಕ ಟ್ವಿಸ್ಟ್..!

kannada t-shirts

ಬೆಂಗಳೂರು,ಡಿ,5,2019(www.justkannada.in): ಲೈಫ್ ಜರ್ನಿಯ ಸೀಕ್ವೆನ್ಸ್… ಕಾರು ಜರ್ನಿಯ ಕ್ಲೈಮಾಕ್ಸ್.. ಒಂದಷ್ಟು ಲವ್ ಸ್ಟೋರಿಯ ಸಸ್ಪೆನ್ಸ್.. ಇದು ಬಬ್ರು ಸಿನಿಮಾದ ಸನ್ಸೇಷನ್..

ಯೆಸ್ ಕನ್ನಡ ಸಿನಿಮಾ ಒಂದು ಅಮೆರಿಕದಲ್ಲಿ ಅಬ್ಬರಿಸೋದು ಅಂದ್ರೆ ಕಡಿಮೇನಾ..?ಅದು ನಿರ್ಮಾಪಕ, ನಿರ್ದೇಶಕರ ಕೈ ಚಳಕ ಅಲ್ಲದೇ ಮತ್ತೇನು..? ಒಂದು ಕಾರಿನ ಜರ್ನಿ ಮೂಲಕ ಇಡೀ ಸಿನಿಮಾವನ್ನ ಕಟ್ಟಿಕೊಡೋದು ಅಂದ್ರೆ ಸಣ್ಣ ವಿಚಾರ ಅಲ್ಲ.. ಅದನ್ನ ಸಿನಿಮಾ ಮೇಕಿಂಗ್ ನಲ್ಲಿ ಸುಜಯ್ ರಾಮಯ್ಯ ಅವರು ಯಶಸ್ವಿಯಾಗಿ ನಿಬಾಯಿಸಿದ್ದಾರೆ. ಒಂದು ಸಿನಿಮಾವನ್ನ ಹೀಗೂ ಮಾಡಬಹುದು ಎಂಬುದನ್ನ ಬೆಳದಿಂಗಳ ಬಾಲೆ ಖ್ಯಾತಿಯ ನಟಿ ಸುಮನ್ ನಗರ್ ಕರ್ ನಿರ್ಮಾಣ ಮಾಡಿ ತೋರಿಸಿದ್ದಾರೆ. ಜೊತೆಗೆ ತಾನೇ ನಟಿಸಿರುವ ಸುಮನ್, ಈ ಕಥೆಗೆ ಐಕಾನ್.

ಈ ಸಿನಿಮಾದಲ್ಲಿ ಕಾರಿನ ಹೆಸ್ರು ಬಬ್ರು ಅಂತ.. ಇಲ್ಲಿ ಮಾಹಿ ಹಿರೇಮಠ್ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡೋಕೆ ತೆರಳೋದೋ ಸಿನಿಮಾದ ಕಥಾ ಅಂದರ. ಆದ್ರೆ, ಈ ಸಿನಿ ಜರ್ನಿಯಲ್ಲಿ ನಡೆಯೋ ಪ್ರಸಂಗವೇ ಬೇರೆ.. ಪಯಣದ ಮಧ್ಯದಲ್ಲಿ ಡ್ರಗ್ಸ್ ಭೂತ ಬೆಂಬಿಡದೆ ಕಾಡುತ್ತೆ.. ಇದು ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಾ ಹೋಗುತ್ತೆ.. ಜೀವನದಲ್ಲಿ ಏಳು ಬೀಳುಗಳು, ಅಚಾನಕ್ ಆಗಿ ಹೇಗೆ ಎದುರಾಗುತ್ತೆ ಅನ್ನೋದೇ ಇಲ್ಲಿ ಥ್ರಿಲ್ಲಿಂಗ್.  ಕತೆ ಶುರುವಾದಲ್ಲಿಂದ ಕೊನೆ ಘಟ್ಟದವರೆಗೆ ಪ್ರಶ್ನೆಗಳ ಸುರಿಮಳೆಯನ್ನೇ ಸೃಷ್ಟಿಸುತ್ತೆ. ಹಾಗಾದ್ರೆ ಈ ಸಿನಿಮಾದಲ್ಲಿ ಅಂತದ್ದೇನಿದೆ ಅನ್ನೋದನ್ನ, ಸಿನಿಮಾ ನೋಡಿಯೇ ತಿಳಿದುಕೊಂಡ್ರೆ ಚೆನ್ನಾಗಿರುತ್ತೆ.

ಇಲ್ಲಿ ನಾಯಕನ ಪಾತ್ರದಲ್ಲಿ ಅರ್ಜುನ್ ಕ್ಯಾರೆಕ್ಟರ್ ಸಖತ್ ವರ್ಕೌಟ್ ಆಗಿದೆ. ವಿಲನ್ ಪಾತ್ರ ಮಾಡಿರೋ ಫೆಡರೀಕ್ ನ ಖಡಕ್  ಲುಕ್ ಗೆ ಸಿನಿ ಪ್ರಿಯರಂತೂ ಬೋಲ್ಡ್ ಆಗೋದು ಗ್ಯಾರಂಟಿ.. ಒಂದು ವಿಶೇಷ ಎಂದ್ರೆ, ಈ ಸಿಮಾದಲ್ಲಿ ಬ್ಯಾಕ್ ರೌಂಡ್ ಮ್ಯೂಜಿಕ್ ಮಾನವನ ಧ್ವನಿಯ ಮೂಲಕವೇ ಮಾಡಿದ್ದಾರೆ. ಇದು ಹೊಸ ಪ್ರಯತ್ನಕ್ಕೆ ಕನ್ನಡಿ ಹಿಡಿದಂತಾಗಿದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶದಲ್ಲಿ ಹಾಡುಗಳು ಮನ ಮುಟ್ಟುತ್ತೆ.. ಇನ್ನು ಕ್ಯಾಮೆರಾ ವರ್ಕ್ ಮತ್ತಷ್ಟು ಹೆಚ್ಚಿಸಿಕೊಂಡಿದ್ರೆ, ಸಿನಿಮಾದ ರಂಗು ಹೆಚ್ಚುತ್ತಿತ್ತು ಎನ್ನುಸುತ್ತೆ.

ಇಲ್ಲಿ ಗಮನಿಸಬೇಕಾದ ವಿಷಯ ಎಂದ್ರೆ, ಈ ಬಬ್ರು ಸಿನಿಮಾವನ್ನ ಫೂರ್ತಿಯಾಗಿ ಅಮೆರಿಕದಲ್ಲೇ ಚಿತ್ರಿಕರಣ ಮಾಡಿದ್ದಾರೆ. ಒಂದು ಕನ್ನಡ ಸಿನಿಮಾ ಸಂಫೂರ್ಣವಾಗಿ ಅಮೆರಿಕಾದಲ್ಲಿ ಚಿತ್ರಿಕರಣ ಮಾಡಿರೋದು ಇದೇ ಮೊದಲು ಅನ್ನೋದು ಹೆಮ್ಮೆಯ ವಿಚಾರ.. ಇಡೀ ಚಿತ್ರತಂಡ, ಸಿನಿಮಾ ಶೂಟಿಂಗ್ ಮುಗಿಯುವವರೆಗೂ ಅಮೆರಿಕಾದಲ್ಲೇ ನೆಲೆಸಿದ್ರು.. ಇನ್ನು ಈ ಅಮೆರಿಕ ಭಾಗದ ಕೆಲವು ಪ್ರವಾಸಿ ತಾಣಗಳು ನಿಮ್ಮನ್ನ ಆಕರ್ಷಣೆ ಮಾಡದೇ ಇರದು.. ಒಟ್ಟಾರೆ, ಸಿನಿಮಾದ ಸಖತ್ ಥ್ರಿಲ್ಲಿಂಗ್ ಅನುಭವ ನೀಡೋದಂತೂ ಸುಳ್ಳಲ್ಲ.

 

ಕೃಪೆ…

ಶಿವಕುಮಾರ ಡಿ.ಎ ದಾರದಹಳ್ಳಿ

Key words: babru-movie-terrible- twist!

website developers in mysore