ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ರಾಜವಂಶಸ್ಥ ಯದುವೀರ್ ರಿಂದ ಪೂಜೆ ಸಲ್ಲಿಕೆ.

ಮೈಸೂರು,ಅಕ್ಟೋಬರ್,4,2022(www.justkannada.in): ನವರಾತ್ರಿಯ ಸಂಭ್ರಮ ಸಡಗರ ಇಂದಿಗೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಡಗರ, ಸಂಭ್ರಮ ಮನೆ ಮಾಡಿದೆ.

ಮುಂಜಾನೆಯಿಂದಲೇ ಅರಮನೆಯಲ್ಲಿ  ಆಯುಧ ಪೂಜೆ ಕೈಂಕರ್ಯಗಳು ಆರಂಭವಾದವು. ಬೆಳಗ್ಗೆ 6 ಗಂಟೆಗೆ ಚಂಡಿಕಾ ಹೋಮ ಪೂಜಾ ವಿಧಿ ವಿಧಾನ  ನೆರವೇರಿತು. 7.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ ಪಟ್ಟದ ಹಸು ಪಟ್ಟದ ಕುದುರೆ ಆಗಮನ, 8.10ಕ್ಕೆ ರಾಜರ ಖಾಸಾ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಲಾಯಿತು.

9 ಗಂಟೆಗೆ ಚಂಡಿಕಾ ಹೋಮ ಪೂರ್ಣಾಹುತಿ, 9.25ಕ್ಕೆ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣ ಮಂಟಪಕ್ಕೆ ವಾಪಸ್ ಆಯಿತು. ನಂತರ 11.02 ರಿಂದ 11.25ರ ಶುಭ ಮುಹೂರ್ತದಲ್ಲಿ ರಾಜವಂಶಸ್ಥ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಅವರು ಆಯುಧಗಳಿಗೆ ಪೂಜೆ ಸಲ್ಲಿಸಿದರು.

ಮಹಡಿಯ ಮೇಲೆ ಮೊಮ್ಮಗನ ಜೊತೆ ಕುಳಿತು ರಾಜವಂಶಸ್ಥೆ ಪ್ರಮೋದದೇವಿ ಪೂಜಾ ಕೈಂಕರ್ಯ ವೀಕ್ಷಣೆ ಮಾಡಿದರು.

Key words: Ayudha Puja -Celebration – Mysore Palace-Yaduvir.