ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಜಾಗೃತಿ: ಮೈಸೂರು ರೈಲ್ವೆ ಪೊಲೀಸರ ಈ ಕ್ರಮಕ್ಕೆ ಮೆಚ್ಚುಗೆ…

ಮೈಸೂರು,ನವೆಂಬರ್,2,2020(www.justkannada.in): ಚಲಿಸುವ ರೈಲಿನಲ್ಲಿ ಕಳ್ಳತನ, ಲೈಂಗಿಕ ದೌರ್ಜನ್ಯದಂತಹ ಅಪರಾಧ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.  ಇಂತಹ ಅಪರಾಧಗಳನ್ನ ತಡೆಗಟ್ಟಲು ರೈಲ್ವೆ ಇಲಾಖೆ ಹಲವು ಕ್ರಮಗಳನ್ನ ಕೈಗೊಂಡಿದೆ. ಈ ಮಧ್ಯೆ ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಕಾಪಾಡುವ ದೃಷ್ಠಿಯಿಂದ ಈ ಬಗ್ಗೆ ಜಾಗೃತಿ ಮೂಡಿಸಲು ಮೈಸೂರು ರೈಲ್ವೆ ಪೊಲೀಸರು ಮುಂದಾಗಿದ್ದಾರೆ.awareness-safety-women-passengers-mysore-railway-police

ರೈಲು ಪ್ರಯಾಣದ ವೇಳೆ ಸುರಕ್ಷತೆ ಹಾಗೂ ಮುಂಜಾಗ್ರತೆ ಕುರಿತು ಮಹಿಳಾ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಹಾಗೂ ಮಾಹಿತಿ ನೀಡುವ ಮೂಲಕ  ಮೈಸೂರು ಆರ್ ಪಿಎಫ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಯಾಣಿಸುವ ರೈಲುಗಳ ಪ್ರತಿಯೊಂದು ಬೋಗಿಗಳಿಗೂ ತೆರಳಿ ಆರ್ ಪಿಎಫ್ ಪೊಲೀಸರು ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಜಾಗೃತಿ ಹಾಗೂ ಸಲಹೆ ನೀಡುತ್ತಿದ್ದಾರೆ.

ಮಹಿಳಾ ಪ್ರಯಾಣಿಕರ ಮಾಹಿತಿ ಸಂಗ್ರಹಿಸಿ ಪ್ರಯಾಣದ ವೇಳೆ ಅಗತ್ಯಬಿದ್ದಲ್ಲಿ ಮುಂದಿನ ನಿಲ್ದಾಣಗಳಲ್ಲಿ ಸಹಾಯಹಸ್ತ ನೀಡಲು ರೈಲ್ವೆ ಪೊಲೀಸರು ನೆರವಾಗಲಿದ್ದು ಮೈಸೂರು ರೈಲ್ವೆ ಪೊಲೀಸರ ಈ ಕ್ರಮಕ್ಕೆ ಮಹಿಳಾ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.awareness-safety-women-passengers-mysore-railway-police

Key words: Awareness – safety -women passengers- Mysore- Railway Police