ಮೈಸೂರಿನ ಅಭಿರುಚಿ ಪ್ರಕಾಶನಕ್ಕೆ ಪ್ರಶಸ್ತಿ: ವಡ್ಡಗೆರೆ, ಅಮಿನಗಡಗೂ ಸಂತಸ, ಸಂಭ್ರಮ

ಮೈಸೂರು: ಕನ್ನಡ ಪುಸ್ತಕ ಪ್ರಾಧಿಕಾರವು 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರಾಧಿಕಾರದ ಅಧ್ಯಕ್ಷ,ಮೈಸೂರಿನ ಡಾ. ಎಂ.ಎನ್. ನಂದೀಶ್ ಹಂಚೆ ಪ್ರಕಟಿಸಿದ್ದಾರೆ.
ಮೈಸೂರಿನ ಅಭಿರುಚಿ ಪ್ರಕಾಶನಕ್ಕೆ ಪ್ರಶಸ್ತಿ ಲಭಿಸಿದ್ದರೆ, ಪತ್ರಕರ್ತರಾದ ಚಿನ್ನಸ್ವಾಮಿ ವಡ್ಡಗೆರೆ, ಗಣೇಶ ಅಮಿನಗಡ ಅವರಿಗೂ ಸಂತಸ, ಸಂಭ್ರಮ ಒಲಿದಿದೆ.
ವಾರ್ಷಿಕ ಪುಸ್ತಕ ಸೊಗಸು, ಮುದ್ರಣ ಸೊಗಸು ಬಹುಮಾನ ವಿಭಾಗದಲ್ಲಿ ಮೈಸೂರಿನ ಅಭಿರುಚಿ ಪ್ರಕಾಶನ ಪ್ರಕಟಿಸಿರುವ ಚಿನ್ನಸ್ವಾಮಿ ವಡ್ಡಗೆರೆ ಅವರ ‘ಬಂಗಾರದ ಮನುಷ್ಯರು ಕೃತಿ ತೃತೀಯ ಬಹುಮಾನ ಪಡೆದಿದೆ.
ಉಳಿದಂತೆ, ಬೆಂಗಳೂರಿನ ಸಪ್ನ ಬುಕ್ ಹೌಸ್ಗೆ (ಡಾ.ಸಿ.ಚಂದ್ರಪ್ಪ ಅವರ ‘ಡಾ.ಬಿ.ಆರ್. ಅಂಬೇಡ್ಕರ್ ಮಹಾಮಾನವನ ಮಹಾಯಾನ’) ಪ್ರಥಮ ಬಹುಮಾನಕ್ಕೆ ತುಮಕೂರಿನ ನಮ್ಮ ಪ್ರಕಾಶನವನ್ನು (ಕೃಷ್ಣಮೂರ್ತಿ ಬಿಳಿಗೆರೆ ಅವರ ‘ಭೂಮಿಯೊಂದು ಮಹಾಬೀಜ’) ದ್ವಿತೀಯ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.
ಸಾಹಿತಿ ಡಾ. ಬಸವರಾಜ ಕಲ್ಗುಡಿ ಅವರನ್ನು ‘ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ,
ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಐಬಿಎಚ್ ಪ್ರಕಾಶನಕ್ಕೆ ಒಲಿದಿದೆ.
ಮಂಗಳೂರಿನ ಆಕೃತಿ ಪ್ರಿಂಟ್ಸ್ ಅನ್ನು ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಮೈಸೂರಿನ ಗಣೇಶ ಅಮೀನಗಡ ಅವರ ‘ವನ್ಯವರ್ಣ’ ಕೃತಿಯ ಮುದ್ರಣ ಅಚ್ಚುಕಟ್ಟುತನಕ್ಕಾಗಿ ಬಹುಮಾನ ಲಭಿಸಿದೆ.