ಪ್ರಾಧಿಕಾರ, ಅಕಾಡೆಮಿ ಬಲಗೊಳಿಸಲು ಕ್ರಮ – ಸಚಿವ ಅರವಿಂದ ಲಿಂಬಾವಳಿ…..

ಬೆಂಗಳೂರು,ಫೆಬ್ರವರಿ,9,2021(www.justkannada.in): ಪ್ರಾಧಿಕಾರ, ಅಕಾಡೆಮಿ ಬಲಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.jk

ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುವ ವಿವಿಧ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಅಧ್ಯಕ್ಷರುಗಳು ಹಾಗೂ ನಾಲ್ಕು ರಂಗಾಯಣಗಳ ನಿರ್ದೇಶಕರ ಜೊತೆ ಸಭೆ ನಡೆಸಿದರು. ವಿಕಾಸಸೌಧ ದಲ್ಲಿ  ನಡೆದ ಈ ಸಭೆಯಲ್ಲಿ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳು ಕೈಗೊಳ್ಳುತ್ತಿರುವ ಕಾರ್ಯಚಟುವಟಿಕೆಗಳು ,ಅವರ ಬೇಡಿಕೆ ಮತ್ತು ಅಹವಾಲುಗಳನ್ನು ಆಲಿಸಿದರು.

ಪ್ರತಿಯೊಂದು ಪ್ರಾಧಿಕಾರ ಮತ್ತು ಅಕಾಡೆಮಿಗಳ ಅಧ್ಯಕ್ಷರ ಜೊತೆ ಸಂವಾದ ನಡೆಸಿದ ಸಚಿವ ಅರವಿಂದ ಲಿಂಬಾವಳಿ,  ಅವುಗಳನ್ನು ಬಲಪಡಿಸಲು ಹಾಗೂ ಸಾಂಸ್ಕೃತಿಕವಾಗಿ ಪರಿಣಾಮಕಾರಿ ಮಾಡಲು ಏನೆಲ್ಲಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಚರ್ಚಿಸಿದರು,

ಜಾನಪದವನ್ನು ಪಠ್ಯದಲ್ಲಿ ಸೇರಿಸುವ ಬಗ್ಗೆ, ಜಾನಪದ ಹಳ್ಳಿ ರೂಪಿಸುವ ಬಗ್ಗೆ ಸಮಾಲೋಚನೆ ನಡೆಯಿತು. ಕೆಲವು ಅಕಾಡೆಮಿಗಳು ಪ್ರಶಸ್ತಿ ಸಂಖ್ಯೆ ಹೆಚ್ಚಿಸುವ ಪ್ರಸ್ತಾಪ ಮಾಡಿದವು. ಕಲಾ ಗ್ರಾಮದಲ್ಲಿ ಆರ್ಟ್ ಗ್ಯಾಲರಿ ಸ್ಥಾಪನೆ ಕುರಿತು ಪ್ರಸ್ತಾಪ ಮಾಡಲಾಯಿತು.authority-action-strengthen-academy-minister-arvind-limbavali

ಮೂಡಲಪಾಯ ಯಕ್ಷಗಾನ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸುವ ಅಕಾಡಮಿ ಅಧ್ಯಕ್ಷರ ಪ್ರಸ್ತಾವನೆಗೆ ಸಚಿವ ಅರವಿಂದ ಲಿಂಬಾವಳಿ ಸಕಾರಾತ್ಮಕ ಸ್ಪಂದಿಸಿದರು.ವಿನಾಶದ ಅಂಚಿಗೆ ಬಂದಿರುವ ಕಲಾ ಪ್ರಕಾರಗಳ ರಕ್ಷಣೆಗೆ ಕಾರ್ಯಕ್ರಮ ರೂಪಿಸಲು ತಿಳಿಸಿದರು.

ಸಾಂಸ್ಕೃತಿಕ ವಾತಾವರಣವನ್ನ ಮತ್ತಷ್ಟು ಹೆಚ್ಚು ಮಾಡಲು ಅಗತ್ಯ ಕ್ರಮದ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ ಅವರು ಒಟ್ಟಾರೆ ರಾಜ್ಯದ ಸಂಸ್ಕೃತಿ ಬೆಳವಣಿಗೆಗೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.

Key words: Authority- action- strengthen-  Academy- Minister- Arvind Limbavali.