ಆ.19 ರಂದು ಚಾಮುಂಡಿ ಬೆಟ್ಟ ದೇಗುಲಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ…

ಮೈಸೂರು,ಆ,17,2020(www.justkannada.in): ಭಕ್ತರು ಹೆಚ್ಚಾಗಿ ಆಗಮಿಸುವ ಹಿನ್ನೆಲೆ  ಆಗಸ್ಟ್ 19ರ  ಅಮಾವಾಸ್ಯೆ ದಿನದಂದು  ಮೈಸೂರು ಚಾಮುಂಡಿ ಬೆಟ್ಟ ದೇಗುಲಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.jk-logo-justkannada-logo

ಆಗಸ್ಟ್ 19 ರಂದು ತಾಯಿ ಚಾಮುಂಡಿ ದರ್ಶನಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಆದೇಶ ಹೊರಡಿಸಿದ್ದಾರೆ. ಆದೇಶ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಖಾಸಗಿ ಹಾಗೂ ಸಾರ್ವಜನಿಕರ ವಾಹನ ತೆರಳು ಅವಕಾಶ ಇರಲ್ಲ. ಕೇವಲ ಗ್ರಾಮಸ್ಥರಿಗೆ, ತುರ್ತುಸೇವೆ ವಾಹನಗಳಿಗೆ  ಮಾತ್ರ ಬೆಟ್ಟಕ್ಕೆ ತೆರಳಲು ಅವಕಾಶ ನೀಡಲಾಗಿದೆ.

ಅಮಾವಾಸ್ಯೆಯಂದು ಹೆಚ್ವಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬೆಟ್ಟಕ್ಕೆ ಆಗಮಿಸಲಿದ್ದು ಕೊರೋನಾ  ಹಿನ್ನೆಲೆ ಜನಸಂದಣಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ದೇವಾಲಯದಲ್ಲಿ ಎಂದಿನಂತೆ ಅಮಾವಾಸ್ಯೆ ಪೂಜೆ‌ ನಡೆಯಲಿದೆ. ಅರ್ಚಕರು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಮಾತ್ರ ಅವಕಾಶ ನೀಡಲಾಗಿದೆ.august-19th- restriction - public -access - Chamundi Hill-Temple.

ಇನ್ನು ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಾಲಯಕ್ಕೆ ಎರಡು ದಿನ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಅಮವಾಸ್ಯೆ ಹಾಗೂ ಗೌರಿ ಗಣೇಶ ಹಬ್ಬದಲ್ಲಿ ಭಕ್ತರು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ, ಆಗಸ್ಟ್ 19 ಹಾಗೂ 21 ರಂದು ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

Key words: august-19th– restriction – public -access – Chamundi Hill-Temple.