ಪ್ರೇಕ್ಷಕರಿಗೆ ಭಾರತ- ವೆಸ್ಟ್ ಇಂಡೀಸ್ ಟಿ-20 ಸರಣಿ ನೋಡುವ ಅವಕಾಶ

Promotion

ಬೆಂಗಳೂರು, ಫೆಬ್ರವರಿ 02, 2022 (www.justkannada.in): ಫೆಬ್ರವರಿ 6 ರಿಂದ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೆ ಪ್ರೇಕ್ಷಕರು ಮೈದಾನಕ್ಕೆ ಪ್ರವೇಶಿಸುವ ಬಗ್ಗೆ ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ಪ್ರತ್ಯೇಕ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೊದಲಿಗೆ ಮೂರು ಏಕದಿನ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯಗಳು ನಡೆಯಲಿವೆ.

ಬಳಿಕ ಕೋಲ್ಕತ್ತಾದಲ್ಲಿ 3 ಟಿ20 ಪಂದ್ಯಗಳು ನಡೆಯಲಿದ್ದು, ಪಶ್ಚಿಮ ಬಂಗಾಳ ಸರ್ಕಾರವು ಈ ಪಂದ್ಯಗಳಿಗೆ 75% ಪ್ರೇಕ್ಷಕರಿಗೆ ಪ್ರವೇಶವನ್ನು ನೀಡಲು ಅನುಮತಿ ಕೊಟ್ಟಿದೆ.

ಬಂಗಾಳ ಸರ್ಕಾರ ನಿರ್ಧಾರದ ನಂತರ ಕೋಲ್ಕತ್ತಾದಲ್ಲಿ 50 ಸಾವಿರ ಪ್ರೇಕ್ಷಕರು ಪಂದ್ಯವನ್ನು ಆನಂದಿಸಲು ಸಾಧ್ಯವಾಗುತ್ತದೆ.