ಮಂಡ್ಯದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ: ಸಚಿವ ನಾರಾಯಣಗೌಡ ಅಸಮಾಧಾನ

ಮೈಸೂರು, ಏಪ್ರಿಲ್ 22,2020: ಮಂಡ್ಯದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವ ಘಟನೆ ಬಗ್ಗೆ ಸಚಿವ ನಾರಾಯಣ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮುದಾಯ ಭವನ ಸರ್ಕಾರದ ಆಸ್ತಿ, ಇದು ಅವರ ಮನೆ ಆಸ್ತಿ ಅಲ್ಲ ಎಂದು ಎಮ್ಮೆಲ್ಸಿ ಶ್ರೀಕಂಠೇಗೌಡ ವಿರುದ್ಧ ಕಿಡಿಕಾರಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ಅವರು ಹೀಗೆ ನಡೆದುಕೊಂಡಿದ್ದು ಸರಿಯಲ್ಲ. ಅವರಿಂದ ದೊಡ್ಡ ತಪ್ಪಾಗಿದೆ. ಮಾಧ್ಯಮದವರು ನಿರಂತರವಾಗಿ ಕೆಲಸ ಮಾಡ್ತಿದ್ದಾರೆ. ಶ್ರೀಕಂಠೇಗೌಡ ಅವರು ಆಡಂಬರ ಹಾಗೂ ಪ್ರಚಾರ ಪ್ರೀಯರು. ಅವರಿಗೆ ಇಷ್ಟು ದಿನ ಪ್ರಚಾರ ಸಿಕ್ಕಿಲ್ಲ. ಅದಕ್ಕೆ ಈ ರೀತಿಯಾದ್ರು ಪ್ರಚಾರ ಪಡೆದುಕೊಳ್ಳೋಣ ಅಂತ ಈ ಮೂಲಕ ರಾಜಕಾರಣ ಮಾಡ್ತಿದ್ದಾರೆ. ಮೊದಲ ಶ್ರೀಕಂಠೇಗೌಡರು ಅವರ ಮಗನಿಗೆ ಸರಿಯಾಗಿ ಬುದ್ದಿ ಹೇಳಬೇಕು ಎಂದು  ಮೈಸೂರಿನಲ್ಲಿ ಸಚಿವ ನಾರಾಯಣ ಗೌಡ ಹೇಳಿದ್ದಾರೆ.

ಇಂತ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಈ ಇಡೀ ಪ್ರಕರಣವನ್ನು ನಾನು ಖಂಡಿಸುತ್ತೇನೆ ಎಂದು ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಇದಕ್ಕು ಮುನ್ನ ಸಚಿವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಶಾ ಕಾರ್ಯಕರ್ತೆಯನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ರು.

ಜೆಡಿಎಸ್- ಕಾಂಗ್ರೆಸ್ ರಾಜಕಾರಣದಿಂದಾಗಿ ಇಂತಹ ಘಟನೆ ನಡೆಯುವಂತಾಗಿದೆ. ಆಕೆಗೆ ಯಾವುದೇ ತೊಂದರೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ. ಕೆಲವರ ಪಿತೂರಿಯಿಂದ ಸರ್ಕಾರದವರು ಯಾರೂ ಬಂದಿಲ್ಲ ಅಂತ ಆರೋಪ ಮಾಡುತ್ತಿದ್ದಾರೆ. ಆದರೆ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಬಂದಿದ್ರು ಎಂದು  ಮೈಸೂರಿನಲ್ಲಿ ಸಚಿವ ನಾರಾಯಣ ಗೌಡ ಹೇಳಿದ್ದಾರೆ.