ಎಂಟು ಮಂದಿ ಪ್ರಯಾಣಿಸುವ ಕಾರುಗಳಿಗೆ ಕನಿಷ್ಠ ಆರು ಏರ್’ಬ್ಯಾಗ್ ಕಡ್ಡಾಯ: ಕೇಂದ್ರ ಸಚಿವಾಲಯದ ಆದೇಶ

Promotion

ಬೆಂಗಳೂರು, ಜನವರಿ 16, 2022 (www.justkannada.in): ಎಂಟು ಮಂದಿ ಪ್ರಯಾಣಿಸುವ ಕಾರುಗಳಿಗೆ ಕನಿಷ್ಠ ಆರು ಏರ್‌ಬ್ಯಾಗ್‌ಗಳು ಕಡ್ಡಾಯ ಎಂಬ ನಿಯಮ ಅಕ್ಟೋಬರ್‌ನಿಂದ ಅನ್ವಯವಾಗಲಿದೆ.

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ಅನ್ವಯ ಪ್ರಯಾಣದ ವೇಳೆ ಉಂಟಾಗುವ ಅಪಘಾತದಿಂದ ಉಂಟಾಗುವ ಅನಾಹುತ ತಪ್ಪಿಸಲು ಕನಿಷ್ಠ ಆರು ಏರ್‌ಬ್ಯಾಗ್‌ ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ

ಈ ಬಗ್ಗೆ ಶುಕ್ರವಾರ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಹೊಸ ನಿಯಮದ ಪ್ರಕಾರ ಎಂಟು ಮಂದಿ ಪ್ರಯಾಣಿಸುವ ಕಾರುಗಳಿಗೆ ಕನಿಷ್ಠ ಆರು ಏರ್‌ಬ್ಯಾಗ್‌ಗಳು ಕಡ್ಡಾಯ ಎಂಬ ನಿಯಮ ಅಕ್ಟೋಬರ್‌ನಿಂದ ಅನ್ವಯವಾಗಲಿದೆ.