ದಲಿತ ಯುವಕನ ಬೆತ್ತಲೆ ಮೆರವಣಿಗೆ ಕೇಸ್: ಸೆಂಟ್ ಮೇರಿಸ್ ಆಸ್ಪತ್ರೆಗೆ  ಪ.ಜಾ ಆಯೋಗದ ಉಪಾಧ್ಯಕ್ಷ ಮುರುಗನ್ ಭೇಟಿ: ಮಾತುಕತೆ…

ಮೈಸೂರು,ಜೂ,17,2019(www.justkannada.in):  ಗುಂಡ್ಲುಪೇಟೆಯ ವೀರಾಪುರ ಗ್ರಾಮದ ವ್ಯಾಪ್ತಿಯಲ್ಲಿ  ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಸೆಂಟ್ ಮೇರಿಸ್ ಆಸ್ಪತ್ರೆಗೆ ಪ.ಜಾ ಆಯೋಗದ ಉಪಾಧ್ಯಕ್ಷ ಮುರುಗನ್ ಭೇಟಿ ನೀಡಿ ಘಟನೆ ಸಂಬಂಧ ಅಧಿಕಾರಿಗಳೊಡನೆ ಮಾತುಕತೆ ನಡೆಸಿದರು.

ಮುರುಗನ್ ಅವರ ಜೋತೆ ಚಾಮರಾಜನಗರ ಅಡಿಷಿನಲ್ ಎಸ್.ಪಿ. ಅನಿತಾ ಹದ್ದಣ್ಣನವರ್, ಎಡಿಸಿ ಅನಂದ್ ಅವರು ಸಹ ಭೇಟಿ ನೀಡಿದ್ದು ಪ್ರತಾಪ್ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದರು.

ಭೇಟಿ ಬಳಿಕ ಮಾತನಾಡಿದ ಪ.ಜಾ, ಉಪಾಧ್ಯಕ್ಷ ಮುರುಗನ್, ಅಟ್ರಸಿಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈಗಾಗಲೇ ಗ್ರಾಮಸ್ಥರನ್ನು ಈ ಕಾಯ್ದೆ ಅಡಿಯಲ್ಲಿ ತರಲಾಗಿದೆ. ಈ ಪ್ರಕರಣವನ್ನು ತಡವಾಗಿ ವಿಡಿಯೋ ವೈರಲ್ ಆದ ನಂತರ ದಾಖಲಿಸಿಕೊಂಡ ಪೋಲಿಸ್ ಆಧಿಕಾರಿಗನ್ನು ಈ ಕಾಯ್ದೆ ಅಡಿಯಲ್ಲಿ ತರಲು ಶಿಫಾರಸು ಮಾಡಲಾಗುತ್ತೆ. ಇದರ ಜೊತೆ ಅಟ್ರಸಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣದ ಸಂಬಂಧಿಸಿದಂತೆ ಆ ಕುಟುಂಬಕ್ಕೆ ಮೊದಲ ಹಂತದಲ್ಲಿ ಈಗಾ 25 ಸಾವಿರ ರೂಗಳನ್ನು ಜಿಲ್ಲಾಡಳಿತ ದಿಂದ  ನೀಡಲಾಗಿದೆ. ಪ್ರಕರಣ ಕುರಿತು ಈಗಾ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದೇನೆ ಎಂದರು.

Key words: assult-youngman-chamarajanagar- Murugan -visits -St. Mary’s Hospital