”ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 140 ಶಾಸಕರ ಗುರಿ” : ಸಿಎಂ ಬಿ.ಎಸ್.ಯಡಿಯೂರಪ್ಪ…!

ಬೆಂಗಳೂರು,ಜನವರಿ,03,2021(www.justkannada.in)  : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ರಿಂದ 150 ಶಾಸಕರನ್ನು ಗೆಲ್ಲಿಸುವ ಗುರಿ ಇಟ್ಟುಕೊಳ್ಳಲಾಗುವುದು. ಇದಕ್ಕಾಗಿ ಪಕ್ಷ ಸಂಘಟಿಸಲು ಶೀಘ್ರವೇ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.jk-logo-justkannada-mysore

ಶಿವಮೊಗ್ಗದ ಪೆಸಿಟ್ ಕಾಲೇಜಿನ ಆವರಣದ ಪ್ರೇರಣಾ ಸಭಾಂಗಣದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿಗೆ ಗರಿಷ್ಠ ಶ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಕೃಷಿಕರಿಗೆ ತೊಂದರೆಯಾಗುವ ಕಸ್ತೂರಿರಂಗನ್ ವರದಿ ಜಾರಿ ಬರಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಕಾನೂನು ಪ್ರಕಾರವೇ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ನಡೆಯಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಅಗ್ರಗಣ್ಯ ನಾಯಕ ಎಂದು ಜಗತ್ತು ಒಪ್ಪಿಕೊಂಡಿದೆ. ದೇಶವನ್ನು ಮಾದರಿ ರಾಷ್ಟçವನ್ನಾಗಿ ಮಾಡಲು ಶ್ರಮ ವಹಿಸಿರುವ ಅಗ್ರಗಣ್ಯ ನಾಯಕ ಮೋದಿ ಅವರು ಮತ್ತೊಂದು ಬಾರಿ ಪ್ರಧಾನಿಯಾಗಿ ದೇಶವನ್ನು ಅಗ್ರಗಣ್ಯ ರಾಷ್ಟವನ್ನಾಗಿ ಮಾಡಲಿ ಎಂದು ಆಶಿಸಿದರು.

370ನೇ ವಿಧಿ ರದ್ದು, ಕೃಷಿ ಸುಧಾರಣಾ ಮಸೂದೆ ಜಾರಿ, ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದಂಥ ಮಹತ್ವದ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ ಎಂದು ವಿವರಿಸಿದರು.

ಇಬ್ಬರೇ ಶಾಸಕರಿದ್ದ ನಮ್ಮ ಪಕ್ಷ ಇವತ್ತು ಅಧಿಕಾರದಲ್ಲಿರಲು ಸಾವಿರಾರು ಜನ ಕಾರ್ಯಕರ್ತರ ತ್ಯಾಗ, ಬಲಿದಾನವೇ ಕಾರಣ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ಯಶಸ್ಸಿಗೆ ಸಾಮೂಹಿಕ ನೇತೃತ್ವ ಹಾಗೂ ಪರಿಶ್ರಮವೇ ಕಾರಣವಾಗಿದೆ. ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಯಶಸ್ಸಿನ ಮೇಲೆ ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶ ನಿಂತಿದೆ. ಆದ್ದರಿಂದ ಅಲ್ಲಿ ನಾವು ಹೆಚ್ಚಿನ ಶ್ರಮ ವಹಿಸಬೇಕು ಎಂದು ಮನವಿ ಮಾಡಿದರು.Assembly-elections-goal-140 legislators-CM B.S.Yeddyurappa ...!ಕಾರ್ಯಕರ್ತರು ಮತ್ತು ಮುಖಂಡರು ಪಕ್ಷದ ಸಂಘಟನೆಗೆ ಕೆಲವು ವರ್ಷಗಳನ್ನಾದರೂ ನೀಡಬೇಕು. ಎರಡರಿಂದ ಮೂರು ಡಿಗ್ರಿ ಪಡೆದ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರ ಪ್ರೇರಣಾದಾಯಕ ಕಾರ್ಯವನ್ನು ನಾವು ಅನುಸರಿಸಬೇಕು ಎಂದು ಅವರು ಆಶಿಸಿದರು.

ಪಕ್ಷದ ಸಂಘಟನೆಯ ದೃಷ್ಟಿಯಿಂದ ಶಿವಮೊಗ್ಗ- ಬೆಂಗಳೂರಿಗೆ ನಡೆಸಿದ ಪಾದಯಾತ್ರೆಗಳು ಹಾಗೂ ಬಗರ್ ಹುಕುಂ ಹೋರಾಟ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜನಸಂಘದ ಕಾಲದಿಂದಲೇ ನಿರಂತರವಾಗಿ ನಡೆಸಿಕೊಂಡು ಬಂದಿರುವುದನ್ನು ಅವರು ನೆನಪಿಸಿದರು.

ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿರುವ ವೀರ ದಾಮೋದರ್ ಸಾವರ್ಕರ್ ಅವರ ಜೀವನದರ್ಶನ, ಅವರ ತ್ಯಾಗ, ಅವರು ಅನುಭವಿಸಿದ ಅತ್ಯಂತ ಕಷ್ಟದ ಕರಿನೀರಿನ ಶಿಕ್ಷೆ ನಮ್ಮೆಲ್ಲರಿಗೂ ರಾಷ್ಟç ನಿರ್ಮಾಣದ ಈ ಪುಣ್ಯ ಕಾರ್ಯಕ್ಕೆ ನಿರಂತ ಪ್ರೇರಣೆ ಎಂದರು. ನಾವೆಲ್ಲರೂ ಒಂದು ಬಾರಿಯಾದರೂ ಈ ದೃಷ್ಟಿಯಿಂದ ಅಂಡಮಾನ್ ಸೆಲ್ಯು¯ರ್ ಜೈಲಿಗೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.

key words : Assembly-elections-goal-140 legislators-CM B.S.Yeddyurappa …!