ರಾಜ್ಯ ವಿಧಾನಸಭಾ ಚುನಾವಣೆ: 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್.

ನವದೆಹಲಿ,ಏಪ್ರಿಲ್,19,2023(www.justkannada.in): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರಸ್  40 ನಾಯಕರನ್ನೊಳಗೊಂಡ  ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ  ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ,  ಪ್ರಿಯಾಂಕಾ ಗಾಂಧಿ,  ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್​​, ಶಶಿ ತರೂರ್, ನಟಿ ರಮ್ಯಾ, ಉಮಾಶ್ರೀ, ಜಗದೀಶ್​ ಶೆಟ್ಟರ್​, ಸತೀಶ್​ ಜಾರಕಿಹೊಳಿ, ಡಿ.ಕೆ.ಸುರೇಶ್​​, ವೀರಪ್ಪ ಮೊಯ್ಲಿ, ಡಾ.ಪರಮೇಶ್ವರ್​, ರಣದೀಪ್ ಸಿಂಗ್ ಸುರ್ಜೇವಾಲ, ಚಿದಂಬರಂ ಇದ್ದಾರೆ.

ಕೆಸಿ ವೇಣುಗೋಪಾಲ್, ಎಂಬಿ ಪಾಟೀಲ್, ಬಿಕೆ ಹರಿಪ್ರಸಾದ್, ಕೆಎಚ್ ಮುನಿಯಪ್ಪ, ಜಯರಾಮ್ ರಮೇಶ್, ರಾಮಲಿಂಗಾರೆಡ್ಡಿ,  ಡಿಕೆ ಸುರೇಶ್, ಜಿಸಿ ಚಂದ್ರಶೇಖರ್, ಸೈಯದ್ ನಾಸಿರ್ ಹುಸೇನ್, ಜಮೀರ್ ಅಹಮದ್ ಖಾನ್, ಹೆಚ್.​​ಎಂ ರೇವಣ್ಣ, ಉಮಾಶ್ರೀ, ಅಶೋಕ್ ಗೆಹ್ಲೋಟ್, ಭೂಪೇಶ್ ಬಘೆಲ್, ಸುಖ್ವಿಂದರ್ ಸಿಂಗ್ ಸುಕ್ಕು, ಪಿ. ಚಿದಂಬರಂ, ಪೃಥ್ವಿರಾಜ್ ಚೌಹಾಣ್, ಅಶೋಕ್ ಚೌಹಾಣ್, ರೇವನಾಥ್ ರೆಡ್ಡಿ, ರಮೇಶ್ ಚೆನ್ನಿತಲ, ಬಿವಿ ಶ್ರೀನಿವಾಸ್, ರಾಜ್ ಬಬ್ಬರ್, ಮಹಮ್ಮದ್ ಅಜರುದ್ದೀನ್, ಇಮ್ರಾನ್ ಪ್ರತಾಪ್ ​ಗರಿ, ಕನ್ನಯ್ಯ ಕುಮಾರ್, ರೂಪ ಶಶಿಧರ್ ಹಾಗೂ ಸಾಧುಕೋಕಿಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Key words: assembly elections-Congress- releases -list – 40 star campaigners.