ವಿದ್ವತ್ ಮೇಲೆ ಹಲ್ಲೆ ಪ್ರಕರಣ: ಮೆಕ್ಕಾಗೆ ತೆರಳಲು ಮೊಹಮ್ಮದ್ ನಲಪಾಡ್ ಗೆ ಅನುಮತಿ ನೀಡಿದ ಹೈ ಕೋರ್ಟ್…

Promotion

ಬೆಂಗಳೂರು,ಮೇ,14,2019(www.justkannada.in): ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಮೆಕ್ಕಾಗೆ ತೆರಳಲು ಹೈಕೋರ್ಟ್ ಅನುಮತಿ ನೀಡಿದೆ.

ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನಲಪಾಡ್ ಜೈಲುಪಾಲಾಗಿ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಈ ನಡುವೆ ಕೋರ್ಟ್ ಷರತ್ತು ವಿಧಿಸಿ ನಲಪಾಡ್ ಗೆ ಜಾಮೀನು ನೀಡಿತ್ತು. ಈ ವೇಳೆ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳದಂತೆ ಕೋರ್ಟ್ ಸೂಚಿಸಿತ್ತು.

ಆದರೆ ಮೊಹಮ್ಮದ್ ನಲಪಾಡ್ ಮೆಕ್ಕಾ ಮದೀನಾ ಯಾತ್ರೆಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್  ಗೆ ಅರ್ಜಿ ಸಲ್ಲಿಸಿದ್ದರು. ನಲಪಾಡ್ ಮನವಿ ಮಾನ್ಯ ಮಾಡಿರುವ ಕೋರ್ಟ್ ಮೆಕ್ಕಾ ಯಾತ್ರೆ ಕೈಗೊಳ್ಳಲು ಅನುಮತಿ ನೀಡಿದೆ. ಮೇ25ರಿಂದ ಜೂನ್ 16ರವರೆಗೆ ಮೆಕ್ಕಾಯಾತ್ರೆಯಲ್ಲಿ ಪಾಲ್ಗೊಳ್ಳಲು ಸೌದಿ ಅರೇಬಿಯಾಗೆ ತೆರಳಲು ಅವಕಾಶ ನೀಡಿದೆ.

Key words: assault – Vidwath-High court –permitted- NalPad -Mekkayatra