ಏಷ್ಯಾನೆಟ್ ನ್ಯೂಸ್, ಮೀಡಿಯಾ ಒನ್ ಪ್ರಸಾರ ನಿರ್ಬಂಧ ತೆರವುಗೊಳಿಸಿದ ಕೇಂದ್ರ ಸಚಿವಾಲಯ

ನವದೆಹಲಿ, ಮಾರ್ಚ್ 7, 2020 (www.juskannada.in): ಐ & ಬಿ ಸಚಿವಾಲಯವು ಏಷ್ಯಾನೆಟ್ ನ್ಯೂಸ್ ಮತ್ತು ಮೀಡಿಯಾ ಒನ್ ಮೇಲೆ 48 ಗಂಟೆಗಳ ನಿಷೇಧವನ್ನು ತೆಗೆದುಹಾಕಿದೆ.

ಕೇರಳ ಮೂಲದ ಟೆಲಿವಿಷನ್ ನ್ಯೂಸ್ ಚಾನೆಲ್ಗಳು ಮತ್ತೆ ಪ್ರಸಾರ ಮಾಡಲು ಅವಕಾಶ ನೀಡಿದೆ. ಮೀಡಿಯಾ ಒನ್ ಟಿವಿ ಸಂಪಾದಕ ಸಿಎಲ್ ಥಾಮಸ್ ಈ ನಿಷೇಧವನ್ನು ‘ದುರದೃಷ್ಟಕರ ಮತ್ತು ಖಂಡನೀಯ’ ಎಂದಿದ್ದರು.

‘ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಎತ್ತಿ ತೋರಿಸಿ, ಒಂದು ನಿರ್ದಿಷ್ಟ ಸಮುದಾಯದ ಪರವಾಗಿ ವರದಿ ಮಾಡಿದ್ದವು ಎನ್ನಲಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರವು ಆ ಚಾನೆಲ್​ಗಳನ್ನು 48 ಗಂಟೆಗಳ ಕಾಲ ನಿಷೇಧಿಸಿ, ಶೋಕಾಸ್​ ನೋಟಿಸ್​ ನೀಡಿತ್ತು.

ಅದರಂತೆ ಮಾಹಿತಿ ಮತ್ತು ಪ್ರಸರಣ ವಿಭಾಗವು ಮೀಡಿಯಾ ಒನ್​ ಮತ್ತು ಏಷ್ಯಾನೆಟ್​ ನ್ಯೂಸ್​ ಚಾನೆಲ್​​ಗಳನ್ನು ಮಾರ್ಚ್​​ 6 ಸಂಜೆ 7.30ರಿಂದ ಮಾರ್ಚ್​​ 8 ಸಂಜೆ 7.30ರವರೆಗೆ ನಿಷೇಧಿಸಿತ್ತು.