ಏಷ್ಯಾಕಪ್ ಕ್ರಿಕೆಟ್: ಇಂದು ಪಾಕಿಸ್ತಾನ-ಶ್ರೀಲಂಕಾ ಫೈಟ್

Promotion

ಬೆಂಗಳೂರು, ಸೆಪ್ಟೆಂಬರ್ 11, 2022 (www.justkannada.in): ಇಂದು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಏಷ್ಯಾ ಕಪ್‌ ಪ್ರಶಸ್ತಿಗಾಗಿ ಪರಸ್ಪರ ಹೋರಾಡಲಿವೆ.

ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಎಲ್ಲ ವಿಭಾಗಗಳಲ್ಲಿಯೂ ಮೇಲುಗೈ ಸಾಧಿಸಿದ್ದ ಶ್ರೀಲಂಕಾ ತಂಡವು ಫೈನಲ್‌ನಲ್ಲೂ ಇದೇ ಫ‌ಲಿತಾಂಶ ದಾಖಲಿಸುವ ಉತ್ಸಾಹದಲ್ಲಿದೆ.

ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಮತ್ತು ತನ್ನ ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ಪ್ರಕ್ಷುಬ್ಧತೆಯನ್ನು ಎದುರಿಸಿರುವ ಶ್ರೀಲಂಕಾ ಕ್ರಿಕೆಟ್‌ ತಂಡವು ಇದೀಗ ಅಮೋಘ ಸಾಧನೆ ಮಾಡುವ ಸ್ಫೂರ್ತಿಯಲ್ಲಿದೆ.

ವೇಳಾಪಟ್ಟಿಯಂತೆ ಶ್ರೀಲಂಕಾವು ಏಷ್ಯಾಕಪ್‌ನ ಆತಿಥ್ಯ ವಹಿಸಬೇಕಿತ್ತು. ಆದರೆ ಆರ್ಥಿಕ ಬಿಕ್ಕಟ್ಟಿ ನಿಂದಾಗಿ ಭದ್ರತಾ ಕಾರಣಗಳಿ ಗಾಗಿ ಈ ಕೂಟವನ್ನು ಕೊನೆ ಕ್ಷಣದಲ್ಲಿ ಯುಎಇಗೆ ಸ್ಥಳಾಂತರಿಸಲಾಗಿತ್ತು