ಅಶ್ವಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವಮಾನವ: ನೋಟೀಸ್ ಮೂಲಕ ಪ್ರಿಯಾಂಕ್ ಖರ್ಗೆ ಬಾಯಿ ಮುಚ್ಚಿಸಲು ಯತ್ನ- ಡಿ.ಕೆ ಶಿವಕುಮಾರ್.

ಬೆಂಗಳೂರು,ಮೇ,5,2022(www.justkannada.in): ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೋಟೀಸ್ ನೀಡುವ ಮೂಲಕ ಪ್ರಿಯಾಂಕ್ ಖರ್ಗೆ ಬಾಯಿ ಮುಚ್ಚಿಸಲು ಯತ್ನಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪ ಮಾಡಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಅಶ್ವಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವಮಾನವ. ಪಿತಾಮಹ.  ಅಶ್ವಥ್ ನಾರಾಯಣ್ ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ. ಅದೇನೋ ಕ್ಲೀನ್ ಮಾಡಿದ್ರಲ್ಲಪ್ಪ ಏನ್ ಮಾಡಿದ್ರು..?. ಅಸಿಸ್ಟೆಂಟ್ ಪ್ರೊಫೆಸರ್ ಹಗರಣ ಹೇಗಾಯ್ತು…? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಗೆ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,   ಮೊದಲು ನಿಮ್ಮ ತಟ್ಟೆಯಲ್ಲಿರುವ ಹೆಗ್ಗಣ ಕ್ಲೀನ್ ಮಾಡಿ. ಮೊದಲು ಗೃಹಸಚಿವರಿಗೆ ನೋಟೀಸ್ ನೀಡಬೇಕು. ಯತ್ನಾಳ್ ಅದೇಷ್ಠೊ ಕೋಟಿ ಇಸ್ಕೊಂಡರು ಅಂತಿದ್ದರು. ಅವರಿಗೆ ನೋಟೀಸ್ ಕೊಡಬೇಕಲ್ಲವಾ..?  ಎಂದು ಕಿಡಿಕಾರಿದರು.corona testing-Reducing - not right-DK Shivakumar - against -government

ದಲಿತ ನಾಯಕರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಪ್ರಿಯಾಂಕ್ ಖರ್ಗೆ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ .  ಪ್ರಿಯಾಂಕ್ ರನ್ನು ಯಾವಾಗ ವಿಚಾರಣೆಗೆ ಕಳಿಸಬೇಕು ಎಂಬುದು ಗೊತ್ತು.  ವಿಚಾರನೆಗೆ ಪ್ರಿಯಾಂಕ್ ಕಳಿಸುವ ಬಗ್ಗೆ ಪಕ್ಷ ನಿರ್ಧರಿಸುತ್ತೆ.  ಪಿಎಸ್ ಐ ನೇಮಕದ ಬಗ್ಗೆ  ಅಕ್ರಮವಾಗಿಲ್ಲ ಅಂತಾ ಗೃಹಸಚಿವರು ಸದನದಲ್ಲಿ ಹೇಳಿದ್ರು. ಆಗಾದರೇ ಅಕ್ರಮ ಹೆಗಾಯಿತು. ಯಾಕೆ ಆರೋಪಿಗಳನ್ನ ಬಂಧಿಸಿದರು..?  ಎಂದು ಡಿ.ಕೆಶಿ ಟಾಂಗ್ ನೀಡಿದರು.

Key words: Ashwath Narayan – corruption-kpcc-president-DK Shivakumar.