ಪ್ರಧಾನಿ ಕರೆಯಂತೆ ದೇಶದ ವಿವಿಧೆಡೆ ‘ಸ್ವಚ್ಛತಾ ಪಖ್ವಾಡಾ- ಸ್ವಚ್ಛತಾ ಹೀ ಸೇವಾ’ 2023 ಅಭಿಯಾನ

Promotion

ಬೆಂಗಳೂರು, ಅಕ್ಟೋಬರ್ 01, 2023 (www.justkannada.in): ‘ಸ್ವಚ್ಛತಾ ಪಖ್ವಾಡಾ- ಸ್ವಚ್ಛತಾ ಹೀ ಸೇವಾ’ 2023 ಅಭಿಯಾನಕ್ಕೆ ಮುಂಚಿತವಾಗಿ ಒಗ್ಗೂಡುವಂತೆ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಅದರಂತೆ ಇಂದು ದೇಶದೆಲ್ಲೆಡೆ ಅಭಿಯಾನ ನಡೆಯಿತು.

ಮನ್ ಕಿ ಬಾತ್ ನ 105 ನೇ ಸಂಚಿಕೆಯಲ್ಲಿ ಪಿಎಂ ಮೋದಿ ಈ ಚಟುವಟಿಕೆಯ ಬಗ್ಗೆ ಪ್ರಸ್ತಾಪಿಸಿದ್ದರು.  ಅಕ್ಟೋಬರ್ 1 ರಂದು ಬೆಳಗ್ಗೆ 10:00 ಗಂಟೆಗೆ ದೊಡ್ಡ ಸ್ವಚ್ಚತಾ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಎಲ್ಲಾ ನಾಗರಿಕರು ಇದರಲ್ಲಿ ಭಾಗವಹಿಸಬೇಕು ಎಂದು ಮೋದಿ ಹೇಳಿದ್ದರು.

ಗಾಂಧಿ ಜಯಂತಿಯ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವಂತೆ ಮೋದಿ ಭಾರತದ ಎಲ್ಲಾ ನಾಗರಿಕರಿಗೆ ಕರೆ ನೀಡಿ, ಈ ಅಭಿಯಾನವನ್ನು ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಎಂದು ಕರೆದಿದ್ದರು.

ನಾಗರಿಕರು ತಮ್ಮ ಬೀದಿಗಳು, ನೆರೆಹೊರೆ, ಉದ್ಯಾನವನ, ನದಿ ಅಥವಾ ಸರೋವರ ಅಥವಾ ಇತರ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನದಲ್ಲಿ ಸೇರಬಹುದು ಎಂದು ಪ್ರಧಾನಿ ಸಲಹೆ ನೀಡಿದರು. ಅದರಂತೆ ದೇಶದ ವಿವಿಧೆಡೆ ಇಂದು ಸ್ವಚ್ಛತಾ ಅಭಿಯಾನ ನಡೆಯಿತು.