ಅರವಿಂದ ಲಿಂಬಾವಳಿ ಸಚಿವರಾಗಿದ್ದಾಗ ಪರ್ಸೆಂಟೇಜ್ ಸಂಗ್ರಹ ಮಾಡುತ್ತಿದ್ದರು- ಮಾಜಿ ಸಿಎಂ ಹೆಚ್.ಡಿಕೆ ಆರೋಪ.

ಬೆಂಗಳೂರು,ಜನವರಿ,4,2022(www.justkannada.in): ಅರವಿಂದ ಲಿಂಬಾವಳಿ ಸಚಿವರಾಗಿದ್ದಾಗ ಪರ್ಸೆಂಟೇಜ್ ಸಂಗ್ರಹ ಮಾಡುತ್ತಿದ್ದರು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದರು.  ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬಿಲ್ಡರ್ ಗಳ ಬಳಿ  ಅರವಿಂದ ಲಿಂಬಾವಳಿ ಪರ್ಸೆಂಟೇಜ್ ಸಂಗ್ರಹಿಸುತ್ತಿದ್ದರು.  ನಂ.1, ನಂ.2  ಎಂದು ಪರ್ಸೆಂಟೇಜ್ ಸಂಗ್ರಹ ಮಾಡುತ್ತಿದ್ದರು. ಆ ನಂ.1 , ನಂ.2 ಏನು..? ಯಾಕೆ ಲಿಂಬಾವಳಿ ಅವರನ್ನ ಸಚಿವ ಸ್ಥಾನದಿಂದ ತೆಗೆದರು  ಎಂದು ಪ್ರಶ್ನಿಸಿದರು.

ಅಮಿತ್ ಶಾ ರಾಜ್ಯ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ,  ಅಮಿತ್ ಶಾ ಬಂದು ರಾಜ್ಯವನ್ನ ಉದ್ಧಾರ ಮಾಡಿಬಿಡ್ತಾರಾ..? ರಾಜ್ಯವನ್ನ ಬಿಜೆಪಿಯವರು ಎಲ್ಲಿಗೆ ತೆಗೆದುಕೊಂಡು ಹೋಗಿದ್ದಾರೆ.  ಇನ್ಸ್ ಪೆಕ್ಟರ್ ಪೋಸ್ಟಿಂಗ್  ಗೆ 1 ಕೋಟಿ ರೂ ಕೊಡಬೇಕು. ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದೆ ಎಂದು ಕಿಡಿಕಾರಿದರು.

ನಾಳೆಯಿಂದ 2ನೇ ಹಂತದ  ಪಂಚರತ್ನ ಯಾತ್ರೆ ಆರಂಭವಾಗಲಿದೆ. ನಾಳೆ ಬೀದರ್ ಕಲ್ಬುರ್ಗಿಯಲ್ಲಿ ಯಾತ್ರೆ ನಡೆಯುತ್ತದೆ.  ಸಂಕ್ರಾಂತಿ ಬಳಿಕ ವಿಜಯಪುರ, ಕೊಪ್ಪಳ, ಯಾದಗಿರಿಯಲ್ಲಿ ಯಾತ್ರೆ ನಡೆಯಲಿದ್ದು, ಫೆಬ್ರವರಿ 5ರವರೆಗೆ ಉತ್ತರ ಕರ್ನಾಟಕದಲ್ಲಿ ಯಾತ್ರೆ ಸಂಚರಿಸಲಿದೆ ಎಂದರು.

Key words: Arvinda Limbavali – collect -percentage – minister-  Allegation-H.D.Kumaraswamy