ಕಲೆ ಮೂಲಕ ಕೊರೊನಾ ಜಾಗೃತಿಗೆ ಮುಂದಾದ ಕಲಾವಿದ ಯೋಗಾನಂದ್

kannada t-shirts

ಮೈಸೂರು, ಮಾರ್ಚ್ 23, 2020 (www.justkannada.in): ಕೊರೋನಾ ವೈರಸ್ , ಕೋವಿಡ್ – 19 ಸೋಂಕಿನ ಬಗ್ಗೆ ಕಲೆಯ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ಮೈಸೂರಿನ ಲಾವಿದರು ಯೋಗಾನಂದ್ ಮಾಡಿದ್ದಾರೆ.

ಮೈಸೂರಿನ ಚಿಕ್ಕ ಗಡಿಯಾರದ ಮುಂಭಾಗ ತಲೆಗೆ ಕೊರೊನಾ ವೈರಾಣು ಮಾದರಿಯ ಚಿತ್ರವನ್ನು ಹಾಕಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಈ ಕುರಿತ ವೀಡಿಯೋ ಕೂಡ ಮಾಡಿರುವ ಕಲಾವಿದ ಯೋಗನಂದ್, ಕೊರೋನಾ ವೈರಸ್ ಇಡೀ ವಿಶ್ವವನ್ನೆ ವ್ಯಾಪಿಸಿ ಮನುಕುಲಕ್ಕೆ ಆತಂಕವನ್ನು ಉಂಟು ಮಾಡಿದೆ. ಜನರಲ್ಲಿ ವೈರಸ್ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸುವುದೊಂದೆ ಸದ್ಯಕ್ಕೆ ಇರುವ ಪರಿಣಾಮಕಾರಿ ಮಾರ್ಗ ಎಂದಿದ್ದಾರೆ.

ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಕೊರೊನಾ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಅದೇ ರೀತಿ ದೃಶ್ಯ ಕಲಾವಿದರಾದ ನಾವೂ ಕೂಡ ಕಲೆಯ ಮೂಲಕ ಕೊರೋನಾ ವೈರಸ್ ಇಂದು ಮೈಸೂರು ನಗರದ ಪ್ರಮುಖ ಸ್ಥಳಗಳಾದ ಚಿಕ್ಕ ಗಡಿಯಾರ, ಗಾಂಧಿ ಸ್ಕ್ವೇರ್‌, ದೊಡ್ಡ ಗಡಿಯಾರ ಸೇರಿದಂತೆ ಹಲವು ಕಡೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದಿದ್ದಾರೆ.

ಕಲಾವಿದ ಯೋಗನಂದ್ ಅವರು ಮಾಡಿರುವ ವೀಡಿಯೋ ಇಲ್ಲಿದೆ ನೋಡಿ….

website developers in mysore