ಕಲಾವಿದೆ ಬಿ. ಭಾನುಮತಿ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಸಂತಾಪ….

ಬೆಂಗಳೂರು,ಮೇ,24,2021(www.justkannada.in): ಕರ್ನಾಟಕ ಕಂಡ ಅಪ್ರತಿಮ ನೃತ್ಯ ಕಲಾವಿದರಲ್ಲಿ ಒಬ್ಬರಾಗಿದ್ಧ, ನೃತ್ಯ ಗುರು ಬಿ.ಭಾನುಮತಿ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.jk

ಮೂಲತ: ಕಲಾವಿದರ ಕುಟುಂಬದಿಂದಲೇ ಬಂದ ಬಿ. ಭಾನುಮತಿ ಅವರು ಭರತನಾಟ್ಯ ನೃತ್ಯ  ಪ್ರಕಾರದಲ್ಲಿ ದೊಡ್ಡ ಹೆಸರು ಮಾಡಿದವರು. ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ನೃತ್ಯ ಸೌಂದರ್ಯವನ್ನು ಪಸರಿಸಿದವರು ಭಾನುಮತಿ.

ಅವರ ‘ನೃತ್ಯ ಕಲಾ ಮಂದಿರಂ ‘ ಶಾಲೆ ಮೂಲಕ ನೂರಾರು ನೃತ್ಯ ಕಲಾವಿದರನ್ನು ತಯಾರು ಮಾಡಿದ ಕೀರ್ತಿ ಭಾನುಮತಿ ಅವರಿಗೆ ಸಲ್ಲುತ್ತದೆ.  ಅವರ ಸಂಯೋಜನೆಯ ‘ಭರತಾಂಜಲಿ ‘ ನೃತ್ಯ ರೂಪಕ ಅಮೆರಿಕ, ಬ್ರಿಟನ್ ಮುಂತಾದ ದೇಶಗಳಲ್ಲಿ ಪ್ರದರ್ಶಿತವಾಗಿ ಜನಪ್ರಿಯವಾಗಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ,ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅಸಂಖ್ಯ ಸನ್ಮಾನಗಳಿಗೆ ಭಾಜನರಾದ ಭಾನುಮತಿ ಅವರ ನಿಧನದಿಂದ ಕರ್ನಾಟಕ ಸಾಂಸ್ಕೃತಿಕ ಲೋಕ ದೊಡ್ಡ ನಷ್ಟ ಅನುಭವಿಸಿದೆ. ಕರೋನಾ ಮತ್ತೊಬ್ಬ ಕಲಾವಿದರನ್ನು ಕರೆದೊಯ್ದಿದೆ.artist-b-bhanumathi-death-condoles-minister-arvind-limbawali

ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Key words: Artist- b. Bhanumathi-death- condoles – Minister- Arvind Limbawali