ಸರ್ಕಾರದ ಮಾತಿಗೂ ಕಿಮ್ಮತ್ತು ನೀಡದ ಬ್ಯಾಂಕ್ ಅಧಿಕಾರಿಗಳು: ಬೆಳಗಾವಿಯ ಮತ್ತೋರ್ವ ರೈತನಿಗೆ ಅರೆಸ್ಟ್ ವಾರೆಂಟ್ ಜಾರಿ…

kannada t-shirts

ಬೆಳಗಾವಿ,ಸೆ,23,2019(www.justkannada.in):  ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವೇಳೆ ಸಾಲ ಮನ್ನಾ ಆಗಿದ್ದರೂ ಇಂದೂ ಸಹ ಅನ್ನದಾತರಿಗೆ ಬ್ಯಾಂಕುಗಳ ಕಿರುಕುಳ ಮುಂದುವರೆದಿದೆ. ಬೆಳಗಾವಿಯ ಮತ್ತೋರ್ವ ರೈತನಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.

ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ರೈತ ನೀಲಕಂಠ ಲಕ್ಕನ್ನವರ ಎಂಬ ರೈತನಿಗೆ  ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಕೊಲ್ಕತ್ತಾ ನ್ಯಾಯಾಲಯದ ಆದೇಶದ ಮೇರೆಗೆ ರಾಮದುರ್ಗ ಠಾಣಾ ಪೋಲಿಸರು ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದಾರೆ.

ಮಲಪ್ರಭಾ ನದಿಯ ಪ್ರವಾಹದಲ್ಲಿ ಹಂಪಿಹೊಳಿ ಗ್ರಾಮ ಪ್ರವಾಹದಲ್ಲಿ ಸಿಲುಕಿತ್ತು. ಇದರಿಂದಾಗಿ  ರೈತ ನೀಲಕಂಠ ಲಕ್ಕನ್ನವರ  ಅವರು ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಂಡಿದ್ದಾರೆ. ರೈತರಿಗೆ ಯಾವುದೇ ವಾರೆಂಟ್, ನೋಟಿಸ್ ನೀಡದಂತೆ ಬ್ಯಾಂಕುಗಳಿಗೆ  ತಾಕೀತು ಮಾಡಿದ್ದರೂ ಸಹ ಬ್ಯಾಂಕ್ ಅಧಿಕಾರಿಗಳು ಜಿಲ್ಲಾಡಳಿತ ಹಾಗೂ ಸರಕಾರದ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ  ವಾರೆಂಟ್ ಜಾರಿ ಮಾಡಿಸಿದ್ದಾರೆ.  ಕಳೆದ ವಾರವಷ್ಟೇ ಸವದತ್ತಿ ರೈತನಿಗೆ  ಬಂಧನ ವಾರೆಂಟ್ ಜಾರಿಯಾಗಿತ್ತು.

Key words: Arrest -warrant -issued – another- farmer – Belgavi

website developers in mysore