ಡ್ರಗ್ಸ್ ಮಾರುತ್ತಿದ್ದ ನಾಲ್ವರು ಆರೋಪಿಗಳ ಬಂಧನ.

ಬೆಂಗಳೂರು,ಜನವರಿ,18,2023(www.justkannada.in): ಡ್ರಗ್ಸ್ ಮಾರುತ್ತಿದ್ದ ನಾಲ್ವರು ಆರೋಪಿಗಳನ್ನ ನಗರದ ವಿದ್ಯಾರಣ್ಯಪುರಂ ಠಾಣಾ ಬಂಧಿಸಿದ್ದಾರೆ.

ಶೇಖ್ ಆಲಿ , ಶೇಖ್ ಸಲ್ಮಾನ್, ಮುಜಾಮಿಲ್ , ವಿನೋದ್ ಕುಮಾರ್ ಬಂಧಿತ ಆರೋಪಿಗಳು. ನಾಲ್ವರು ಸಣ್ಣ ಸಣ್ಣ ಪ್ಯಾಕ್ ಗೆ ಡ್ರಗ್ಸ್  ಹಾಕಿ ಮಾರಾಟ ಮಾಡುತ್ತಿದ್ದರು. ಈ ನಡುವೆ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು ಬಂಧಿತರಿಂದ  2ಕೆಜಿ 380 ಗ್ರಾಂ ಗಾಂಜಾ, 56 ಗ್ರಾಂ ಎಂಡಿಎಂ, 2 ಬೈಕ್ ಜಪ್ತಿ ಮಾಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಾಗಿದೆ.

Key words: Arrest -four -accused – selling –drugs-bangalore