ಇವರು ಶಾಲೆಗಳ ಸಂಪನ್ಮೂಲ ವ್ಯಕ್ತಿಗಳೇ ಅಥವಾ ಪೋಸ್ಟ್ ಮೆನ್ ಗಳೇ?

kannada t-shirts

ಬೆಂಗಳೂರು:ಆ-22:(www.justkannada.in) ಶಾಲೆಗಳ ಗುಣಮಟ್ಟ ಹಾಗೂ ಶಾಲೆಗಳಿಗೆ ಅಗತ್ಯವಿರುವ ಸಂಪನ್ಮೂಲ, ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿವ ಕ್ಲಸ್ಟರ್ ರಿಸೋರ್ಸ್ ಪರ್ಸನ್ಸ್ (CRPs) ಗಳು ಇಂದು ಶಿಕ್ಷಕರು ಹಾಗೂ ಮಧ್ಯಸ್ಥದಾರರ ನಡುವೆ ಪೋಸ್ಟ್ ಮೆನ್ ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಸಿಆರ್ ಪಿಗಳು ಎಲ್ಲಾ ಶೈಕ್ಷಣಿಕ ವರ್ಷಗಳಲ್ಲಿ ಅವರಿಗೆ ನಿಗದಿಪಡಿಸಿದ ಶಾಲೆಗಳಿಗೆ ಸಹಾಯ ಮಾಡುವುದು ಮತ್ತು ಬೆಂಬಲಿಸುವುದು ಅವರ ಕೆಲಸ. ಶಾಲೆಗಳಿಗೆ ಅಗತ್ಯವಿರುವ ಎಲ್ಲಾ ಸಂಪನ್ಮೂಲ ವಸ್ತುಗಳು ಮತ್ತು ಸೌಲಭ್ಯಗಳು ಜಾರಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ ಹಾಗೂ ಅವರ ಕಾರ್ಯವ್ಯಾಪ್ತಿಗೆ ಒಳಪಟ್ಟ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಗಳನ್ನು ನೀಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಈ ಸನ್ನಿವೇಶ ಬದಲಾಗಿದೆ, ಇದರಲ್ಲಿ ಸಿಆರ್‌ಪಿಗಳು ಬ್ಲಾಕ್ ಎಜುಕೇಶನ್ ಆಫಿಸರ್ಸ್ (ಬಿಬಿಇಒ) ಶಾಲೆಗಳಿಗೆ ಕೇವಲ ಸಂವಹನ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಸಿಆರ್ ಪಿ ಗಳು ಶಿಕ್ಷಕರೇ. ಅವರು ತಮ್ಮ ವ್ಯಾಪ್ತಿಯಲ್ಲಿ ಸುಮಾರು 12-15 ಶಾಲೆಗಳ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಸಮಾಗ್ರಶಿಕ್ಷಾ ಕಾರ್ಯಕ್ರಮದಡಿ ಈ ಶಾಲೆಗಳನ್ನು ಬಲಪಡಿಸಲು ನಮಗೆ ಹಣದ ಅಗತ್ಯವಿದೆ ಎಂದು ತಿಳಿಸುತ್ತಾರೆ.

ಶಿಕ್ಷಣತಜ್ನ ನಿರಂಜನಾರಾಧ್ಯ ಅವರ ಪ್ರಕಾರ ಸಿಆರ್ ಪಿ ಶಿಕ್ಷಕರು ಶಾಲೆಗಳ ಗುಣಮಟ್ಟದ ಸಾಮರ್ಥ್ಯವನ್ನು ಬಲಪಡಿಸುವಂತವರಾಗಿರಬೇಕು. ಆದರೆ ದುರದೃಷ್ಟವಶಾತ್ ಅಂತಹ ಬಲವಾದ ಸಿಆರ್ ಪಿಗಳು ಇಲ್ಲದಂತಾಗಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಶಿಕಷಣವನ್ನು ನಾವು ಕಾಣಲು ಸಾಧ್ಯವಾಗುತ್ತಿಲ್ಲ. ಸಿಆರ್ ಪಿಗಳು ಬ್ಲಾಕ್ ರಿಸೋರ್ಸ್ ಪರ್ಸನ್ಸ್ ಅಡಿಯಲ್ಲಿ ಕೆಲಸಮಾಡಬೇಕು. ಮತ್ತು ಶಾಲೆಗಳಲ್ಲಿ ಅವರು ಉತ್ತಮ ಶಿಕ್ಷಕರು, ಗುಣಮಟ್ಟದ ಶಿಕ್ಷಣವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು. ಆದರೆ ಇಂದು ಅದಾವುದೂ ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ವಿದುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಆರ್ಪಿಗಳು ಇಂದಿನ ದಿನಗಳಲ್ಲಿ ಬ್ಲಾಕ್ ಅಧಿಕಾರಿಗಳಿಗೆ ಸಹಾಯಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೇ ಶೈಕ್ಷಣಿಕ ನಾಯಕರು ಆದರೆ ಅವರು ಏನನ್ನೂ ಮಾಡುತ್ತಿಲ್ಲ. ಇನ್ನು ಹಣದ ಕೊರತೆಯ ಬಗ್ಗೆ ಕೇಳಿದರೆ ಬೇಸರವಾಗುತ್ತದೆ. ಮೂಲತಃ ಕೇಂದ್ರದಿಂದ ಹಣವನ್ನು ಒಂದು ಅವಧಿಗೆ ನೀಡಿದಾಗ, ಅದನ್ನು ಬಳಸಿಕೊಳ್ಳಬೇಕು ಮತ್ತು ಅದನ್ನು ರಾಜ್ಯ ಸರ್ಕಾರ ಮುಂದುವರಿಸಿಕೊಂಡು ಹೋಗಬೇಕಾಗುತದೆ. ಆದರೆ ರಾಜ್ಯ ಸರ್ಕಾರ ಅದನ್ನು ಮಾಡಲು ಸಾಧ್ಯವಾಗದಿದ್ದಾಗ ಇಂತಹ ವಿಪತ್ತುಗಳು ಸಂಭವಿಸುತ್ತದೆ ಎಂದು ಹೇಳಿದ್ದಾರೆ.

ಇದು ಸರ್ಕಾರಿ ಶಾಲೆಗಳ ಸ್ಥಿತಿ ಮಾತ್ರವಲ್ಲ ಖಾಸಗಿ ಶಾಲೆಗಳಲ್ಲೂ ಕೂಡ ಇದೇ ಆರೋಪಗಳು ಕೇಳಿಬರುತ್ತಿವೆ ಸಿಆರ್ ಪಿಗಳು ಸುತ್ತೋಲೆ ಹೊರಡಿಸುವುದು, ಮಾಹಿತಿ ನವೀಕರಣ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಹೊರತು ಯಾವುದೇ ಶೈಕ್ಷಣಿಕ ಕಾರ್ಯವನ್ನೂ ನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಎಲ್ಲಾ ಶೈಕ್ಷಣಿಕ ವಿಷಯಗಳನ್ನು ಒಳಗೊಂಡಂತೆ ಅವರಿಗೆ ನಿಗದಿಪಡಿಸಿದ ಶಾಲೆಗಳಿಗೆ ಸಹಾಯ ಮಾಡುವುದು ಮತ್ತು ಬೆಂಬಲಿಸುವುದು,ಆ ಶಾಲೆಗಳಿಗೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳು ಮತ್ತು ಸೌಲಭ್ಯಗಳು ಜಾರಿಯಲ್ಲಿದೆಯೇ ಎಂದು ಪರಿಶೀಲಿಸಿ ಮತ್ತು ಶಾಲೆಗಳಲ್ಲಿ ಶಿಕ್ಷಣ ತಜ್ಞರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಸಿಆರ್ಪಿಗಳ ಪಾತ್ರವಾಗಿದೆ.

ಇವರು ಶಾಲೆಗಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳೇ ಅಥವಾ ಪೋಸ್ಟ್ ಮೆನ್ ಗಳೇ?

Are these Cluster Resource Persons or postmen?

website developers in mysore